ಸುಳ್ಯದ ಶ್ರೀರಾಮಪೇಟೆಯಲ್ಲಿ ಹೋಟೆಲ್ ರೂಪ ಶುಭಾರಂಭ

0

ಸುಳ್ಯ ಶ್ರೀರಾಮ್ ಪೇಟೆಯ ಅಕ್ಷತಾ ಸೆಂಟ್ರಲ್ ಸ್ಕ್ವೇರ್ ಎದುರು ಸಸ್ಯಹಾರಿ ಮತ್ತು ಮಾಂಸಾಹಾರಿ ಹೋಟೆಲ್ ರೂಪ ಜ. 18ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಗಣಹೋಮ ನಡೆಯಿತು.


ಈ ಸಂದರ್ಭದಲ್ಲಿ ಮಾಲಕ ರಾಘವ ಕಳಂಜ,ಸುಂದರ ರಾವ್,ರಾಧಾಕೃಷ್ಣ ಪರಿವಾರಕಾನ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


ಇಲ್ಲಿ ಕರಾವಳಿ ಶೈಲಿಯ ಶುಚಿ-ರುಚಿಯಾದ ಚಾ, ಕಾಫಿ. ತಿಂಡಿ, ಸಸ್ಯಹಾರಿ ಮತ್ತು ಮಾಂಸಹಾರಿ ಬಾಳೆ ಎಲೆ ಊಟ (ಮನೆ ಊಟ), ಎಲ್ಲಾ ಬಗೆಯ ಮೀನುಗಳ ತವಾ ಪ್ರೈ, ರವಾ ಪ್ರೈ, ಮಸಾಲಾ ಪ್ರೈ, ಚಿಕನ್ ಬಿರಿಯಾಣಿ, ಪುಳಿಮುಂಚಿ, ಸುಕ್ಕ, ಕಬಾಬ್ ಮುಂತಾದ ಖಾದ್ಯಗಳು ದೊರೆಯುತ್ತದೆ ಮತ್ತು
ಸಭೆ ಸಮಾರಂಭಗಳಿಗೆ ಇಡ್ಲಿ, ನೀರ್ ದೋಸೆ, ಸೇಮಿಗೆ, ಬನ್ಸ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.