ಪೈಂಬೆಚ್ಚಾಲಿನಲ್ಲಿ ಗ್ರಾಂಡ್ ಅಜ್ಮೀರ್ ನೇರ್ಚೆ 9ನೇ ವಾರ್ಷಿಕೋತ್ಸವ ಹಾಗೂ ತ್ರಿದಿನ ಮಹಿಫ್ಲೇ ನಸೀಹ ಕಾರ್ಯಕ್ರಮಕ್ಕೆ ಚಾಲನೆ

0

ಪೈಂಬೆಚ್ಚಾಲು ಹಯಾತುಲ್ ಇಸ್ಲಾಂ ಹಯರ್ ಸೆಕೆಂಡರಿ ಮದರಸ ವತಿಯಿಂದ ಹಮ್ಮಿಕೊಂಡಿರುವ ಗ್ರಾಂಡ್ ಅಜ್ಮೀರ್ ನೇರ್ಚೆ 9ನೇ ವಾರ್ಷಿಕೋತ್ಸವ ಮತ್ತು ತ್ರಿದಿನ ಮಹಫಿಲೇ ನಸೀಹ ಕಾರ್ಯಕ್ರಮಕ್ಕೆ ಜ.19 ರಂದು ಪೈಂಬೆಚ್ಚಾಲು ಮಸೀದಿ ವಠಾರದಲ್ಲಿ ಚಾಲನೆ ನೀಡಲಾಯಿತು.

ಜನವರಿ 19ರಂದು ಬೆಳಗ್ಗಿನ ನಮಾಜ್ ಬಳಿಕ ಮೌಲಿದ್ ಪಾರಾಯಣ ಹಾಗೂ ದುವಾ ಮಜ್ಲಿಸ್ ಕಾರ್ಯಕ್ರಮವನ್ನು ಸಯ್ಯಿದ್ ಕುಂಞಿ ಕೋಯಾ ಸಅದಿ ತಂಙಳ್ ಸುಳ್ಯ ರವರು ನೆರವೇರಿಸಿ ಚಾಲನೆ ನೀಡಿದರು.
ಮುಖ್ಯ ಪ್ರಭಾಷಣವನ್ನು ಕೇರಳದ ಖ್ಯಾತ ವಾಗ್ಮಿ ಶರೀಫ್ ಸಅದಿ ಮುನ್ನಿಪಾಡಿ ನೆರವೇರಿಸಿದರು.

ಬಳಿಕ ಬೆಳಿಗ್ಗೆ 9 ಗಂಟೆಗೆ ಸ್ಥಳೀಯ ಮಸೀದಿ ಗೌರವ ಅಧ್ಯಕ್ಷ ಪಿ ಎಂ ಮೂಸಾ ಹಾಜಿ ಧ್ವಜಾರೋಹಣ ನೆರವೇರಿಸಿದರು.
ಮಧ್ಯಾಹ್ನ ಜುಮಾ ನಮಾಝಿನ ಬಳಿಕ ಖತಮುಲ್ ಕುರಾನ್ ನಡೆದು ದುವಾ ನೇತೃತ್ವವನ್ನು ಕರ್ನಾಟಕ ರಾಜ್ಯ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ನೆರವೇರಿಸಿದರು.
ಬಳಿಕ ಸೈಯದ್ ಹುಸೈನ್ ಪಾಷಾ ತಂಙಳ್ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಖವ್ವಾಲಿ ಆಲಾಪನೆ ನಡೆಯಿತು.
ರಾತ್ರಿ 8 ಗಂಟೆಗೆ ಕೇರಳದ ಖ್ಯಾತ ಖವ್ವಾಲಿ ತಂಡದ ವತಿಯಿಂದ ಖಾಸಿಂ ಹಸನಿ ಖಾಮಿಲ್ ಸಕಾಫಿ ಪಾಲಕ್ಕಾಡ್ ಇವರ ನೇತೃತ್ವದಲ್ಲಿ ಪ್ರಕೀರ್ತನಾ ಹಾಗೂ ಖವ್ವಾಲಿ ನಡೆದು ಸಾಮೂಹಿಕ ಪ್ರಾರ್ಥನೆಯನ್ನು
ಅಸ್ಸಯ್ಯದ್ ಉಮರ್ ಜಿಫ್ರಿ ತಂಙಳ್ ಕುಂಭಕ್ಕೋಡು ನೆರವೇರಿಸಿದರು.

ಜನವರಿ 20ರಂದು ರಾತ್ರಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಸಮಿತಿ ಅಧ್ಯಕ್ಷ ಟಿ ಎಂ ಅಬ್ದುಲ್ ಖಾದರ್ ವಹಿಸಲಿದ್ದು ಖ್ಯಾತ ಪಂಡಿತ ಲುಕ್ಮಾನುಲ್ ಹಕೀಮ್ ಸಕಾಫಿ ಪುಲ್ಲಾರ ಮುಖ್ಯ ಪ್ರಭಾಷಣವನ್ನು ಮಾಡಲಿದ್ದಾರೆ.

ಜನವರಿ 21ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ಕೊಯಮ್ಮ ತಂಙಳ್ ವಹಿಸಿ ದುವಾಶೀರ್ವಚನ ನೀಡಲಿದ್ದಾರೆ.
ಮುಖ್ಯ ಪ್ರಭಾಷಣವನ್ನು ಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ನೆರವೇರಿಸಲಿದ್ದು ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಅಹದಲ್ ತಂಙಳ್ ಮುತ್ತನೂರು ಸಾಮೂಹಿಕ ದುವಾ ನೆರವೇರಿಸಲಿದ್ದು ವೇದಿಕೆಯಲ್ಲಿ ವಿವಿಧ ಧಾರ್ಮಿಕ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.