ಜಯನಗರ ಶ್ರೀ ಆದಿಮೊಗೇರ್ಕಳ ದೈವಸ್ಥಾನದಲ್ಲಿ ಶ್ರೀ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆ ಪ್ರಯುಕ್ತ ವಿಶೇಷ ಕಾರ್ಯಕ್ರಮ

0

ಜಯನಗರ ಶ್ರೀ ಆದಿ ಮೊಗೆರ್ಕಳ ದೈವಸ್ಥಾನದಲ್ಲಿ ಇಂದು ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ ಶ್ರೀ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಹಿಂದೂ ಬಾಂಧವರಿಂದ ಸ್ಥಳೀಯ ದೈವಗಳಿಗೆ ಪೂಜೆ ಕಾರ್ಯ ಹಾಗೂ ಶ್ರೀರಾಮ ತಾರಕ ಯಜ್ಞ ಹೋಮ, ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.
ಯಜ್ಞಾ ಕಾರ್ಯಕ್ರಮವನ್ನು ಪುರೋಹಿತ ಶಿವಪ್ರಸಾದ್ ಮೆನಾಲ ನಡೆಸಿದರು.ಸ್ಥಳಿಯ ಪುರೋಹಿತರುಗಳಾದ ಬಾಬುನಾರಾಜೆ,ಶಿವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದೈವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಕೇಶವ ಮಾಸ್ತರ್ ಹೊಸಗದ್ದೆ,ಕಾರ್ಯದರ್ಶಿ ಸುಂದರ ಕುತ್ಪಾಜೆ, ಸಮಿತಿಯ ಪದಾಧಿಕಾರಿಗಳು ಊರಿನ ಎಲ್ಲಾ ಹಿಂದೂ ಬಾಂಧವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಶ್ರೀರಾಮ ಭಜನಾ ಕಾರ್ಯಕ್ರಮ ನಡೆಯಿತು. ಎಲ್ ಇ ಡಿ ಮುಖಾಂತರ ಭಕ್ತಾದಿಗಳಿಗೆ ಶ್ರೀ ಬಾಲ ರಾಮನ ವಿಗ್ರಹದ ಪ್ರತಿಷ್ಠಾಪನ ನೇರ ವೀಕ್ಷಣೆಯನ್ನು ವೀಕ್ಷಿಸಲು ಸೌಕರ್ಯವನ್ನು ಕಲ್ಪಿಸಲಾಗಿತ್ತು.