ಜಯನಗರ ಶ್ರೀ ಗಜಾನನ ಭಜನಾ ಮಂದಿರದಲ್ಲಿ ಅಯೋಧ್ಯ ಶ್ರೀ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆ ಪ್ರಯುಕ್ತ ವಿಶೇಷ ಕಾರ್ಯಕ್ರಮ

0

ಕರ ಸೇವಕರುಗಳಿಗೆ ಸನ್ಮಾನ

ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ ಶ್ರೀ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಜಯನಗರ ಶ್ರೀ ಗಜಾನನ ಭಜನಾ ಮಂದಿರದಲ್ಲಿ ವಿಶೇಷ ಪೂಜೆ,ಪ್ರತಿಷ್ಠಾನ ಕಾರ್ಯಕ್ರಮದ ನೇರ ವೀಕ್ಷಣೆ, ಜಯನಗರದಿಂದ ಕರೆ ಸೇವಕರಾಗಿ ತೆರಳಿದ್ದ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸ್ಥಳೀಯ ನಿವಾಸಿಗಳಾದ ಕುಸುಮಾಧರ ಕೆ ಜೆ, ಗೋಪಾಲಕೃಷ್ಣ ಕರೋಡಿ, ಗಂಗಾಧರ ವಾಗ್ಲೆ, ರಾಧಾಕೃಷ್ಣ ವಾಗ್ಲೆ ಇವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸಮಿತಿಯ ಅಧ್ಯಕ್ಷ ಮಾಧವ ಎ, ಕಾರ್ಯದರ್ಶಿ ಅಮಿತ್ ಕುಮಾರ್, ಕೋಶಾಧಿಕಾರಿ ರಾಜೇಶ್ ಪ್ರಭು, ಸ್ಥಳೀಯ ನಗರ ಪಂಚಾಯತಿ ಸದಸ್ಯೆ ಶಿಲ್ಪಾಸುದೇವ್, ಗೌರವಾಧ್ಯಕ್ಷ ನಾಗರಾಜ ಮೇಸ್ತ್ರಿ, ಹಿರಿಯರಾದ ರಾಧಾಕೃಷ್ಣ ನಾಯಕ್, ಶಿವನಾಥ್ ರಾವ್ ಹಳೆಗೇಟು, ಪ್ರವೀಣ್ ಕುಮಾರ್ ಎ ಎಂ, ಸುರೇಂದ್ರ ಕಾಮತ್, ಹಾಗೂ ಊರಿನ ಎಲ್ಲಾ ಹಿಂದೂ ಬಾಂಧವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಶ್ರೀರಾಮ ಭಜನಾ ಕಾರ್ಯಕ್ರಮ ನಡೆಯಿತು. ಎಲ್ ಇ ಡಿ ಮುಖಾಂತರ ಭಕ್ತಾದಿಗಳಿಗೆ ಶ್ರೀರಾಮ ಮಂದಿರದ ಪ್ರತಿಷ್ಠಾಪನ ನೇರ ವೀಕ್ಷಣೆಯನ್ನು ವೀಕ್ಷಿಸಲು ಸೌಕರ್ಯವನ್ನು ಕಲ್ಪಿಸಲಾಗಿತ್ತು.