ರಾಮರಾಜ್ಯದ ಪರಿಕಲ್ಪನೆಯಡಿಯಲ್ಲಿ ಸರಕಾರದ ಕೆಲಸ

0

ಜಾತಿ, ಧರ್ಮ, ಪಕ್ಷ ಮೀರಿ ಎಲ್ಲ ವರ್ಗದವರಿಗೂ ಸರಕಾರದ ಯೋಜನೆಯನ್ನು ತಲುಪಿಸುವ ಮೂಲಕ ಸಾಮಾಜಿಕ ನ್ಯಾಯದಡಿಯಲ್ಲಿ ನಮ್ಮ ಸರಕಾರ ಕೆಲಸ ಮಾಡುತ್ತಿದೆ. ಇದು ರಾಮರಾಜ್ಯದ ಕಲ್ಪನೆಯೂ ಕೂಡಾ ಆಗಿರುವುದರಿಂದ ಆ ನಿಟ್ಟಿನಲ್ಲೆ ನಮ್ಮ ಸರಕಾರ ಕೆಲಸ ಮಾಡುತ್ತಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಜ.23ರಂದು‌ ದ.ಕ. ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಜನರಿಗೆ ಬಹಳಷ್ಟು ಸಮಸ್ಯೆಗಳು ಇರುತ್ತದೆ. ಅದಕ್ಕೆ ಸ್ಪಂದನೆ ಮಾಡಬೇಕಾದುದು ಸರಕಾರದ ಕರ್ತವ್ಯ. ಆ ನಿಟ್ಟಿನಲ್ಲಿ ಪ್ರತೀ ಜಿಲ್ಲಾ ಕೇಂದ್ರಗಳಲ್ಲಿ ಜನ ಸ್ಪಂದನೆ ಹಮ್ಮಿಕೊಳ್ಳಳಾಗಿದೆ. ಎಲ್ಲ ಅರ್ಜಿಗಳನ್ನು ಸ್ವೀಕರಿಸಿ ಅದಕ್ಕೆ ಪರಿಹಾರ ಕೊಡಲಾಗುವುದು ಎಂದು‌ಹೇಳಿದರು.

ನಮ್ಮ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭ 5 ಗ್ಯಾರಂಟಿ ಯೋಜನೆಗಳನ್ನು ಹೇಳಿದ್ದೆವು. ಅದನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ದೇಶದ ಇತಿಹಾಸದಲ್ಲೇ ದೊಡ್ಡ ಪ್ರಮಾಣದಲ್ಲಿ ಯೋಜನೆಗಳು ಜನರ ಮನೆಗೆ ತಲುಪುತ್ತಿರುವುದು ದಾಖಲೆ. ರಾಜ್ಯದಲ್ಲಿ 1 ಕೋಟಿ 14 ಲಕ್ಷ ಕುಟುಂಬಕ್ಕೆ 2 ಸಾವಿರ ಗೃಹಲಕ್ಷ್ಮಿ ನೀಡಲಾಗುತ್ತಿದೆ. 1 ಕೋಟಿ 32 ಲಕ್ಷ ಮಂದಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇದೆ ಹೀಗೆ ಎಲ್ಲ ಯೋಜನೆಗಳು ಜನಪರವಾಗಿದ್ದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂಬ ಪಕ್ಷ ಬೇಧ ವಿಲ್ಲದೆ ಎಲ್ಲರಿಗೂ ಸಿಗುತ್ತಿದೆ ಎಂದವರು ಹೇಳಿದರು.