ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ಕುಸಿದು ಬಿದ್ದಿರುವ ಚರಂಡಿ ಸ್ಲಾಬ್‌ಗಳು

0

ಸಾಮಾಜಿಕ ಜಾಲತಾಣಗಳಲ್ಲಿ ಫೊಟೋ ವೈರಲ್, ದುರಸ್ತಿಗೆ ಆಗ್ರಹಿಸಿದ ಸ್ಥಳೀಯರು

ಸುಳ್ಯ ನಗರದ ಮುಖ್ಯರಸ್ತೆಯ ಚರಂಡಿ ಸ್ಲ್ಯಾಬುಗಳು ಅಲ್ಲಲ್ಲಿ ಕುಸಿದು ಬಿದ್ದಿದ್ದು ಈ ಬಗ್ಗೆ ಇದನ್ನು ಸರಿಪಡಿಸಿ ಕೊಡುವಂತೆ ಆಗ್ರಹಿಸಿ ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ದುರಸ್ತಿಗಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.


ಸುಳ್ಯದ ಹಳೆಗೇಟು ಬಳಿ ಕಳೆದ ಹಲವಾರು ತಿಂಗಳುಗಳಿಂದ ಚರಂಡಿಯ ಸ್ಲಾಬ್ ಕಲ್ಲುಗಳು ಮುರಿದು ಬಿದ್ದು ಈ ಭಾಗದಲ್ಲಿ ಬರುವ ವಾಹನ ಸವಾರರು ಕೆಲವರು ಈ ಚರಂಡಿಯಲ್ಲಿ ಬಿದ್ದ ಘಟನೆಗಳು ಕೂಡ ವರದಿಯಾಗಿದೆ.


ಅದೇ ರೀತಿ ನಗರದ ಖಾಸಗಿ ಬಸ್ಸು ನಿಲ್ದಾಣದ ಬಳಿ, ಗಾಂಧಿನಗರ, ಮುಂತಾದ ಕಡೆಗಳಲ್ಲಿ ಇದೆ ಪರಿಸ್ಥಿತಿ ನಿರ್ಮಾಣವಾಗಿದೆ. ಪತ್ರಿಕೆಗಳಲ್ಲಿ ಇದರ ಬಗ್ಗೆ ವರದಿಗಳು ಬಂದಿದ್ದರೂ ಇದನ್ನು ಸರಿಪಡಿಸಿಲ್ಲ. ಸಂಬಂಧ ಪಟ್ಟವರು ಇತ್ತ ಗಮನಹರಿಸಿ ಇದನ್ನು ದುರಸ್ತಿ ಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.