ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಕ್ಕೆ ಜನತಾದರ್ಶನದಲ್ಲಿ ಅಶ್ರಫ್ ಗುಂಡಿ ಮನವಿ

0

ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅರಂತೋಡು, ತೊಡಿಕಾನ, ಸಂಪಾಜೆ, ಮಕಂಜ ಮತ್ತು ಆಲೆಟ್ಟಿ ಗ್ರಾಮಸ್ಥರ ಕೇಂದ್ರವಾಗಿದ್ದು ರೋಗಿಗಳಿಗೆ ಮತ್ತು ದಾಖಲೆ ಪತ್ರಗಳಿಗೆ ದೂರದ ಸುಳ್ಯ ಸಮುದಾಯ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿರುವುದರಿಂದ ಅರಂತೋಡು ಪ್ರಾಥಮಿಕ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸುಳ್ಯದಲ್ಲಿ ನಡೆದ ಜನತಾದರ್ಶನದಲ್ಲಿ ಅಶ್ರಫ್ ಗುಂಡಿ ಮನವಿ ಸಲ್ಲಿಸಿದರು. ಈ ಬಗ್ಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ವೈದ್ಯರ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿದ್ದು. ಶೀಘ್ರದಲ್ಲಿ ಭರ್ತಿ ಮಾಡಲಾಗುವುದು ಎಂದರು.