
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರುವಿನಲ್ಲಿ ೭೫ ನೇ ಗಣರಾಜ್ಯೋತ್ಸವ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ ಇವರು ಧ್ವಜಾರೋಹಣ ನೆರವೇರಿಸಿದರು. ನಂತರ ಲಯನ್ಸ್ ಕ್ಲಬ್ ವತಿಯಿಂದ ಸುಮಾರು ೧೧೩ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ಲಾಡನ್ನು ವಿತರಿಸಲಾಯಿತು. ಪೋಷಕರಾದ ಲಕ್ಷ್ಮೀಶ ಶಿರೂರು ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.








ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ರಾಮಚಂದ್ರ ಪಳಂಗಾಯ ಎಂ.ಜೆ.ಎಫ್., ಕಾರ್ಯದರ್ಶಿಯವರಾದ ಸತೀಶ್ ಕೂಜುಗೋಡು, ಸದಸ್ಯರಾದ ರಂಗಯ್ಯ ಶೆಟ್ಟಿಗಾರ್,ಅಶೋಕ್ ಕುಮಾರ್ ಮೂಲೆಮಜಲು, ಕೃಷ್ಣಕುಮಾರ್ ಬಾಳುಗೋಡು, ಅನಂತರಾಮು ಮಣಿಯಾನ, ವಿಷ್ಣು ಪ್ರಸಾದ್ ಪಾತಿಕಲ್ಲು, ಮಲ್ಲೇಶಪ್ಪ, ಗಾಯತ್ರಿ ಕೃಷ್ಣಕುಮಾರ್, ದಿನೇಶ್ ಎನ್.ಪಿ, ಚಂದ್ರಶೇಖರ ಪಾಣತ್ತಿಲ, ದಾನಿಗಳಾದ ಶ್ರೀಮತಿ ತಾರಾಮಲ್ಲಾರ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಎನ್.ಜಿ. ಮತ್ತು ಸದಸ್ಯರು, ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಮಲ ಎ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಕೊನಡ್ಕ, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಪಿ.ಡಿ.ಒ ಚೆನ್ನಪ್ಪ ನಾಯ್ಕ ಮತ್ತು ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆ ಮತ್ತು ಮಕ್ಕಳು,ಶಾಲಾ ಪೋಷಕ ವೃಂದ, ಸಹಶಿಕ್ಷಕರು, ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









