ಜ.31: ಬಡಮಹಿಳೆಗೆ ಮನೆ ಹಸ್ತಾಂತರ
ಫೆ.1,2, : ಎಲಿಮಲೆಯಲ್ಲಿ ನುಸ್ರತ್ ರೂಬಿ ಜುಬಿಲಿ

ಎಲಿಮಲೆಯ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್‌ನ ರೂಬಿ ಜ್ಯುಬಿಲಿ ಹಾಗೂ 75ನೇ ಗಣರಾಜ್ಯೋತ್ಸವದ ಪ್ರಯುಕ್ತ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ಮತ್ತು ಬ್ರೆಡ್ ವಿತರಣೆ ಮಾಡಲಾಯಿತು.
ಸುಳ್ಯ ಪೋಲಿಸ್ ಠಾಣೆ ಉಪ ನಿರೀಕ್ಷಕಿ ಸರಸ್ವತಿ ಉದ್ಘಾಟಿಸಿದರು.
















ಸರಕಾರಿ ಆಸ್ಪತ್ರೆಯ ಡಾ.ಸೌಮ್ಯ, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಳಿನಿ, ಎಲಿಮಲೆ ಮಸೀದಿಯ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಕಾರ್ಯದರ್ಶಿ ಹನೀಫ್ ಮೆತ್ತಡ್ಕ, ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ, ಡೇವಿಡ್ ಧೀರಾ ಕ್ರಾಸ್ತಾ, ನ.ಪಂ.ಸಿಬ್ಬಂದಿ ಶ್ರವಣ್ ಕುಮಾರ್, ಅಶ್ರಫ್ ಜಿರ್ಮುಖಿ,ರಹೀಂ ಬೀಜದಕಟ್ಟೆ
ನುಸ್ರತುಲ್ ಇಸ್ಲಾಂ ಅಸೋಸಿಯೇಷನ್‌ನ ಅಧ್ಯಕ್ಷ ಲತೀಫ್ ಹರ್ಲಡ್ಕ, ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ, ನಿರ್ದೇಶಕ ಶರೀಫ್ ಜಟ್ಟಿಪಳ್ಳ, ದುಬೈ ಸಮಿತಿಯ ಅಧ್ಯಕ್ಷ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.

ನುಸ್ರತ್ ನಲವತ್ತು ವರ್ಷದ ಪ್ರಯುಕ್ತ ನಲವತ್ತು ಕಾರ್ಯಕ್ರಮಗಳ ಪೈಕಿ ನಲವತ್ತನೆ ಕಾರ್ಯಕ್ರಮ ಬಡಮಹಿಳೆಗೆ ಮನೆ ಹಸ್ತಾಂತರ ಮನೆ ಹಸ್ತಾಂತರ ಕಾರ್ಯಕ್ರಮ ಜ.31 ರಂದು ನಡೆಯಲಿದೆ.

ನುಸ್ರತುಲ್ ಇಸ್ಲಾಂ ಎಸೋಸಿಯೇಶನ್‌ನ ರೂಬಿ ಜ್ಯುಬಿಲಿ ಫೆ 1 ಮತ್ತು 2 ರಂದು ಜರಗಲಿದ್ದು, ಅದರ ಪ್ರಯುಕ್ತ ನಡೆಯುವ ನೂತನ ಕಛೇರಿ ಉದ್ಘಾಟನೆ ,
ಸಾಮಾಜಿಕ ನಾಯಕರ ಸಮಾವೇಶ, ಧಾರ್ಮಿಕ ಉಪನ್ಯಾಸ ಹಾಗೂ ಅರಿವಿನ್ ನಿಲಾವ್ ಆತ್ಮೀಯ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ.









