ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕರಸೇವಕರಿಗೆ ಸನ್ಮಾನ

0

ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ
ಪ್ರಾಣ ಪ್ರತಿಷ್ಠೆಯ ದಿನವಾದ ಜ.22 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು.

ಅಂದು ಬೆಳಗ್ಗೆ ಭಜನೆ ಹಾಗೂ ವಿಶೇಷ ಪೂಜೆಯ ನಡೆಯಿತು. ಬಳಿಕ ಚಂದ್ರಶೇಖರ ಭಟ್ ತಳೂರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಈ ಭಾಗದಿಂದ 1990 ಮತ್ತು 1992 ರಲ್ಲಿ ಕರಸೇವಕರಾಗಿ ಅಯೋಧ್ಯೆಗೆ ತೆರಳಿದ್ದ
ಬಿ.ಕೆ ಬೆಳ್ಯಪ್ಪ ಗೌಡ, ವೆಂಕಟ್ ವಳಲಂಬೆ, ಚಂದ್ರಶೇಖರ ಮೊಟ್ಟೆಮನೆ, ಕುಶಾಲಪ್ಪಗೌಡ ಮೊಟ್ಟೆಮನೆ, ಸುನಿತ ಎಂ.ಡಿ ರಾಮಣ್ಣ ಗೌಡ ಮೊಗ್ರ, ಶಿವರಾಮ ನೆಕ್ಲಾಜೆ, ಕೇಶವ ಕಾಂತಿಲ, ಪದ್ಮನಾಭ ದಂಬೆಕೋಡಿ, ಚಂದ್ರಶೇಖರ ಭಟ್ ತಳೂರು, ಎ.ವಿ ತೀರ್ಥರಾಮ, ಪದ್ಮನಾಭ ಚಳ್ಳ, ಕೃಷ್ಣಪ್ಪ ಗೌಡ ಮಾವಿನಕಟ್ಟೆ, ರಮಾನಂದ ಮೆಟ್ಟಿನಡ್ಕ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.