ನಗರದಲ್ಲಿ ಬೀದಿ ನಾಯಿಗಳ ಹಾವಳಿ

0

ಯುವಕನಿಗೆ ಕಚ್ಚಿ ಗಾಯ : ಸಾರ್ವಜನಿಕರಲ್ಲಿ ಆತಂಕ

ಸುಳ್ಯ‌ನಗರದ ಕೆಲವೆಡೆ ಬೀದಿ ನಾಯಿಗಳ‌ ಹಾವಳಿ ಹೆಚ್ಚಾಗಿದೆ. ನಾವೂರು ಪರಿಸರದಲ್ಲಿ ಯುವಕನೊಬ್ಬನಿಗೆ ನಾಯಿ ಕಚ್ಚಿ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ವರದಿಯಾಗಿದೆ.

ಈ ಪ್ರದೇಶದಲ್ಲಿ ಬೆಳಗ್ಗೆ ನಿಂದ ಸಂಜೆವರೆಗೆ ಮಕ್ಕಳು, ಸಾರ್ವಜನಿಕರು ಸಂಚರಿಸುತ್ತಿದ್ದು, ಬೀದಿ ನಾಯಿಗಳ ಕಾಟದಿಂದ ಸಂಚರಿಸಲು ಭಯಪಡುವಂತಾಗಿದೆ.

ಬೀದಿ ನಾಯಿಗಳ ಹಾವಳಿ ಹಾಗೂ ಯುವಕನಿಗೆ ಕಚ್ಚಿ‌ಗಾಯವಾಗಿರುವ ಕುರಿತು ಪಂಚಾಯತ್ ಸದಸ್ಯ ಶರೀಫ್ ಕಂಠಿಯವರು ನ.ಪಂ. ಮುಖ್ಯಾಧಿಕಾರಿ ಯವರಿಗೆ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.