ಸುದ್ದಿ ಬಿಡುಗಡೆ ಜಾಹಿರಾತು ಪ್ರತಿನಿಧಿ ದಿ.ನವೀನ್ ಕಿಶೋರ್ ರವರಿಗೆ ಸುಳ್ಯ ಸುದ್ದಿ ಕಚೇರಿಯಲ್ಲಿ ನುಡಿನಮನ

0

ಸುದ್ದಿ ಬಿಡುಗಡೆ ಜಾಹಿರಾತು ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಟ್ಲ ಕುದ್ದುಪದವಿನ ನವೀನ್ ಕಿಶೋರ್ ರವರು ಇಂದು ನಸುಕಿನ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ್ದು, ಅವರಿಗೆ ಸುದ್ದಿ ಬಳಗ ಸುಳ್ಯದ ವತಿಯಿಂದ ಶ್ರದ್ಧಾಂಜಲಿ ಸಭೆಯು ಇಂದು ಸುಳ್ಯ ಸುದ್ದಿ ಕಚೇರಿಯಲ್ಲಿ ನಡೆಯಿತು.

ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಮೃತರ ಗುಣಗಾನ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.

ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ನುಡಿನಮನ ಸಲ್ಲಿಸಿದರು.

ಒಂದು ನಿಮಿಷ ಮೌನ ಪ್ರಾರ್ಥನೆ ನೆರವೇರಿಸಿ ಮೃತರ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಸುದ್ದಿ ಬಳಗದ ಸದಸ್ಯರು ಉಪಸ್ಥಿತರಿದ್ದರು.