ಹಿರಿಯರ ಕ್ರೀಡಾಕೂಟದಲ್ಲಿ ಪಿ.ಎಸ್. ಹರಿಣಾಕ್ಷಿ ನಡುಗಲ್ಲು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0

ವೆಟರನ್ಸ್ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡಿನ ತಿರುನಲ್ವೇಲಿಯ ಅಣ್ಣಾ ಸ್ಟೇಡಿಯಂನಲ್ಲಿ ಫೆ.2 ರಿಂದ 4ರವರೆಗೆ ನಡೆದ 43ನೇ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ನಾಲ್ಕೂರು ಗ್ರಾಮದ ನಡುಗಲ್ಲು ವರ್ಪಾರೆ ಹಿರಿಯಡ್ಕ ಶಿವ ಕುಮಾರ್ ಇವರ ಪತ್ನಿ ಶ್ರೀಮತಿ ಪಿ.ಎಸ್. ಹರಿಣಾಕ್ಷಿ ಇವರು 5000ಮೀ ಓಟ, 1500 ಮೀ ಓಟ, 800 ಮೀ ಓಟ, 4×400 ಮೀ ರಿಲೇಯಲ್ಲಿ ಪ್ರಥಮ, 4×100 ಮೀ ರಿಲೇಯಲ್ಲಿ ದ್ವಿತೀಯ ಮತ್ತು ಲಾಂಗ್ ಜಂಪ್ ನಲ್ಲಿ ತೃತೀಯ ಸ್ಥಾನ ಗಳಿಸಿ, ಸೆಪ್ಟೆಂಬರ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಇವರು ಮರ್ಕಂಜ ಗೋಳಿಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತೇರ್ಥಮಜಲು ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ.