ಸೋನಾ ಅಡ್ಕಾರಿಗೆ ಸ್ವಸ್ತಿಕ್ ಕಲಾ ಪ್ರಶಸ್ತಿ 2024

0

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾ ಕೇಂದ್ರ (ರಿ) ಜಲ್ಲಿಗುಡ್ಡೆ ಬಜಾಲ್, ಮಂಗಳೂರು 20ನೇ ವರ್ಷದ ವಿಂಶತಿ ಸಾಂಸ್ಕೃತಿಕ ವೈಭವ 2024ರ ಫಿಲ್ಮಿ, ಜಾನಪದ, ಪಾಶ್ಚಾತ್ಯ,ಭಾರತೀಯ ಕಲಾಪ್ರಕಾರ ಡ್ಯಾನ್ಸ್ , ಯೋಗ , ಹುಲಿ ವೇಷದಲ್ಲಿ 10ರ ಇಳಿ ವಯಸ್ಸಿನಲ್ಲಿ ಹತ್ತಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಸೋನಾ ಅಡ್ಕಾರ್ ರಿಗೆ ಸ್ವಸ್ತಿಕ್ ಕಲಾ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಈಕೆ ಜಾಲ್ಸೂರು ಗ್ರಾಮದ ಅಡ್ಕಾರ್ ಮನೆತನದ ಶರತ್ ಅಡ್ಕಾರ್ ಹಾಗೂ ಶೋಭಾ ಶರತ್ ಅಡ್ಕಾರ್ ರವರ ಸುಪುತ್ರಿ. ಈಕೆಯು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಸುಳ್ಯ 5ನೇ ತರಗತಿಯಲ್ಲಿ ಓದುತ್ತಿದ್ದಾಳೆ.

ಇವಳು ನೃತ್ಯ ಮತ್ತು ಹುಲಿವೇಷ ಕುಣಿತವನ್ನು ತರುಣ್ ರಾಜ್ ಮಂಗಳೂರು ಹಾಗೂ ಯೋಗವನ್ನು ಸಂತೋಷ್ ಮುಂಡೊಕಜೆಯವರಲ್ಲಿ ಕಲಿಯುತ್ತಿದ್ದು,ಇವರೆಗೆ 10ಕ್ಕಿಂತಲೂ ಹೆಚ್ಚು ಕಡೆ ಈಕೆಯ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ್ದಾರೆ.