ಫೆ. 15: ನಿಂತಿಕಲ್ಲಿನ‌ ಮುಗುಪ್ಪು ಎಂಬಲ್ಲಿ ಶ್ರೀ ದೇವಿ ಮಹಾತ್ಮೆ

0

ಶ್ರೀಮತಿ ಲಲಿತಾ ಪುರ್ಲುಮಕ್ಕಿ, ನರಿಯೂರು, ಶ್ರೀಮತಿ ಕವಿತಾ ರವಿಪ್ರಕಾಶ್, ರವಿಪ್ರಕಾಶ್ ಮುಗುಪ್ಪು ಮಾ. ಚಿರಾಗ್ ಮತ್ತು ಮಾ. ಚಿರಾಜ್ ಇವರ ನಿಂತಿಕಲ್ಲಿನ ಬಳಿ ಇರುವ ಶ್ರೀ ದೇವಿ ಕೃಪಾ ಮುಗುಪ್ಪು ಮನೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಫೆ. 15ರಂದು ಸಂಜೆ 5.30ರಿಂದ ನಡೆಯಲಿದೆ. ರಾತ್ರಿ 9.00 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ. ಕಲಾಭಿಮಾನಿಗಳು, ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಟೀಲು ಶ್ರೀ ದೇವಿಯ ಕೃಪೆಗೆ ಪಾತ್ರರಾಗುವಂತೆ ಶ್ರೀಮತಿ ಕವಿತಾ ರವಿಪ್ರಕಾಶ್ ಮುಗುಪ್ಪು ತಿಳಿಸಿರುತ್ತಾರೆ.