2 ವರುಷ , 18 ಅಭ್ಯರ್ಥಿಗಳು ಸೇನೆಗೆ

0

ದ್ವಾರಕಾ ಕನ್ಸ್ಟ್ರಕ್ಷನ್ ಪ್ರಾಯೋಜಕತ್ವ , ನಿವೃತ್ತ ಸೈನಿಕ ಸಂಘದ ಸಹಕಾರ…

ಅಗ್ನಿಪಥ್ ಸಹಿತ ಎಲ್ಲಾ ಸೇನಾ ನೇಮಕಾತಿಗೂ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಿದ ವಿದ್ಯಾಮಾತಾ…

ಪುತ್ತೂರು : ಅಗ್ನಿಪಥ್ ಸೇರಿದಂತೆ ವಿವಿಧ ನೇಮಕಾತಿಗಳಿಗೆ ದೈಹಿಕ ಹಾಗೂ ಲಿಖಿತ ಪರೀಕ್ಷಾ ತರಬೇತಿಯನ್ನು ನೀಡುವುದರ ಮೂಲಕ ನೂರಾರು ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ದಾರಿ ದೀಪವಾದ ವಿದ್ಯಾಮಾತಾ ಅಕಾಡೆಮಿಯು ,ನೂತನ ಸಾಲಿನಲ್ಲಿಯೂ ಕರಾವಳಿ ಭಾಗದ ಯುವ ಜನತೆ ಅತೀ ಹೆಚ್ಚು ಸಂಖ್ಯೆಯಲ್ಲಿ ಸೇನೆಗೆ ಸೇರಬೇಕೆಂಬ ಸದುದ್ದೇಶದಿಂದ , ಉಚಿತ ತರಬೇತಿಯನ್ನು ಆಯೋಜಿಸಿದೆ. ಈ ಯೋಜನೆಗೆ ನಿರ್ಮಾಣ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವಂಥಹ ಪುತ್ತೂರಿನ ಪ್ರತಿಷ್ಠಿತ ಸಂಸ್ಥೆ ದ್ವಾರಕಾ ಕನ್ಸ್ಟ್ರಕ್ಷನ್ ಪ್ರಾಯೋಜಕತ್ವವನ್ನು ವಹಿಸಿದ್ದು , ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಅಂದದ ನಿವೇಶನ ನಿರ್ಮಿಸಿ ಕೊಡೋ ಮೂಲಕ ದ್ವಾರಕಾ ಕನ್ಸ್ಟ್ರಕ್ಷನ್ ತನ್ನ ಅಮೂಲ್ಯ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಿದೆ.


ಹಾಗೇನೆ , ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ಸೈನಿಕರ ಸಂಘದ ಸಹಕಾರವೂ ವಿದ್ಯಾಮಾತಾ ಅಕಾಡೆಮಿಯ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದೆ.
ಜಿಲ್ಲಾ ನಿವೃತ್ತ ಸೈನಿಕರ ಸಂಘ ಕಳೆದ 2 ವರ್ಷದಿಂದ ವಿದ್ಯಾಮಾತ ಅಕಾಡೆಮಿಯ ಸೇನಾ ನೇಮಕಾತಿಗಳ ಉಚಿತ ತರಬೇತಿಗೆ ಪೂರ್ಣ ಸಹಕಾರವನ್ನು ನೀಡುತ್ತ ಬಂದಿದ್ದು , ತರಬೇತಿ ಅವಧಿಯಲ್ಲಿ ನಿವೃತ್ತ ಸೇನಾಧಿಕಾರಿಗಳ ಮೂಲಕ ಜಾಗೃತಿಯನ್ನು ಮೂಡಿಸುವ ಕಾರ್ಯಗಳಲ್ಲಿ ಕೈ ಜೋಡಿಸುತ್ತಿದೆ .ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಪುತ್ತೂರು, ಸುಳ್ಯ ,ಬೆಳ್ತಂಗಡಿ, ಕಡಬ, ಬಂಟ್ವಾಳ ತಾಲೂಕು ಸಮಿತಿಯ ಪದಾಧಿಕಾರಿಗಳು ಕೂಡ ತರಬೇತಿ ಅವಧಿಯಲ್ಲಿ ಆಗಮಿಸಿ , ಸೂಕ್ತ ಸಲಹೆ , ಮಾರ್ಗದರ್ಶನ ನೀಡಲಿದ್ದಾರೆ.


ಆಸಕ್ತಿಯುಳ್ಳವರು ಉಚಿತ ತರಬೇತಿಗೆ ಆಯ್ಕೆ ಬಯಸಲು ಪುತ್ತೂರು ಇಲ್ಲವೇ ಸುಳ್ಯ ಇಲ್ಲಿನ ವಿದ್ಯಾಮಾತಾ ಅಕಾಡೆಮಿ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

  • ವಯಸ್ಸು 16 ರಿಂದ 23 ವರ್ಷ.
  • ದೈಹಿಕ ಸದೃಢತೆಯ ಮತ್ತು ಲಿಖಿತ ಪರೀಕ್ಷಾ ತರಬೇತಿ ಸಂಪೂರ್ಣ ಉಚಿತವಾಗಿದ್ದು, ಕಡ್ಡಾಯವಾಗಿ ಪಾಲ್ಗೊಳ್ಳಬೇಕು.
  • ತರಬೇತಿ 6 ತಿಂಗಳು , ಪ್ರತಿ ಭಾನುವಾರ ಬೆ.7 – ಮಧ್ಯಾಹ್ನ 1ರ ತನಕ. (ದೈಹಿಕ ಸದೃಢತೆಯ ಮೈದಾನ ತರಬೇತಿ ಬೆ. 7 ರಿಂದ 9 ಹಾಗೂ ಲಿಖಿತ ಪರೀಕ್ಷಾ ತರಬೇತಿ ಬೆ.10 ರಿಂದ ಮಧ್ಯಾಹ್ನ 1:00 ವರೆಗೆ)
  • ಅರ್ಜಿ ಸಲ್ಲಿಸಲು S.S.L.C ಪಾಸ್ , ಸದ್ಯ P.U.C / ಪದವಿ ಕಲಿಯುವ , ಪೂರ್ವ ಗೊಳಿಸಿರುವವರಿಗೆ ಅನ್ವಯಿಸಲಿದ್ದು , ನೋಂದಣಿಯ ಕೊನೆ ಫೆ.21 ಆಗಿರುತ್ತದೆ.

ಕಳೆದ ಎರಡು ವರ್ಷದಿಂದ ಭಾರತೀಯ ಸೇನೆಗೆ 18 ಅಭ್ಯರ್ಥಿಗಳ ಆಯ್ಕೆ…

2022-23 ರ ಸಾಲಿನಲ್ಲಿ ಅಗ್ನಿಪಥ್ ಯೋಜನೆಗೆ 17 ಅಭ್ಯರ್ಥಿಗಳು ತರಬೇತಿಯನ್ನು ಪಡೆದು ಆಯ್ಕೆಯಾಗಿದ್ದು , ಒಬ್ಬರು ಭಾರತೀಯ ಸೇನೆಯ ನರ್ಸಿಂಗ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆ ಆಗಿರುತ್ತಾರೆ. ಈ ಮೂಲಕ ಕಳೆದ ಎರಡು ವರ್ಷದಿಂದ 18 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಕೀರ್ತಿಯು ವಿದ್ಯಾಮಾತಾ ಅಕಾಡೆಮಿಯದಾಗಿದೆ.
ಈ ವರ್ಷವೂ ಭಾರತೀಯ ಸೇನೆಗೆ ಮತ್ತು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಆಗಬೇಕೆಂಬ ನಿಟ್ಟಿನಲ್ಲಿ ಅಕಾಡೆಮಿಯು ಈ ಪ್ರಯತ್ನವನ್ನು ಮಾಡಿದ್ದು , ಯುವ ಜನತೆ ಈ ಉಚಿತ ತರಬೇತಿ ಪ್ರಯೋಜನ ಪಡೆಯುವಂತೆ ಅಕಾಡೆಮಿ ಅಧ್ಯಕ್ಷ ಭಾಗ್ಯೇಶ್ ರೈ ವಿನಂತಿಸಿದ್ದಾರೆ.

ಇನ್ನೂ ಅಧಿಕ ಮಾಹಿತಿಗಾಗಿ ಅಕಾಡೆಮಿಯ ದೂರವಾಣಿ ಸಂಖ್ಯೆ – 9620468869(ಪುತ್ತೂರು) ಅಥವಾ
9448527606 (ಸುಳ್ಯ) ಸಂಪರ್ಕಿಸುವಂತೆ ಕೋರಲಾಗಿದೆ.