ಫೆ. 16 -17: ಉಬರಡ್ಕ ಮಿತ್ತೂರು: ಬಳ್ಳಡ್ಕ ಶ್ರೀ ಕುಮಾರಸ್ವಾಮಿ ಶಿವಮಠದಲ್ಲಿ ದೇವರ ಪೂಜೆ ಮತ್ತು ಧರ್ಮದೈವಗಳ ಮತ್ತು ಉಪ ದೈವಗಳ ನಡಾವಳಿ

0

ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ಶ್ರೀ ಕುಮಾರಸ್ವಾಮಿ ಶಿವಮಠದಲ್ಲಿ ದೇವರ ಪೂಜೆ, ದೈವಸ್ಥಾನದಲ್ಲಿ ಧರ್ಮದೈವಗಳ ಮತ್ತು ಉಪ ದೈವಗಳ ನಡಾವಳಿಯು ಫೆ.16ರಿಂದ 18ರವರೆಗೆ ಜರುಗಲಿದೆ.

ಫೆ.16ರಂದು ರಾತ್ರಿ ಉಗ್ರಾಣ ತುಂಬಿಸಲಾಗುವುದು. ಫೆ.17ರಂದು ಪೂರ್ವಾಹ್ನ ಗಣಪತಿ ಹೋಮ, ನಾಗದೇವರ ಪೂಜೆ, ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.

ಫೆ.17ರಂದು ರಾತ್ರಿ ದೈವಗಳ ಕೂಡುವಿಕೆ ಹಾಗೂ ಉಪ ದೈವಗಳ ಕೋಲ ನಡೆಯಲಿದ್ದು, ಫೆ.18ರಂದು ಬೆಳಿಗ್ಗೆ ರುದ್ರಚಾಮುಂಡಿ ಮತ್ತು ಧೂಮಾವತಿ ಧರ್ಮದೈವಗಳ ಕೋಲ ನಡಾವಳಿ ನಡೆಯಲಿದೆ.
ಬಳಿಕ ಮಾರಿಕಳಕ್ಕೆ ಹೋಗುವುದು, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಪಾಷಾಣಮೂರ್ತಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ.
ಮಾ.8ರಂದು ಶಿವಮಠದಲ್ಲಿ ಶಿವರಾತ್ರಿ ಪೂಜೆ ಹಾಗೂ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ನಡಾವಳಿಗೆ ಗೊನೆ ಮುಹೂರ್ತ

ಬಳ್ಳಡ್ಕ ಶ್ರೀ ಕುಮಾರಸ್ವಾಮಿ ಶಿವಮಠದಲ್ಲಿ ದೇವರ ಪೂಜೆ ಮತ್ತು ದೈವಗಳ ನಡಾವಳಿ ಪ್ರಯುಕ್ತ ಫೆ.10ರಂದು ಬೆಳಿಗ್ಗೆ ಮುಹೂರ್ತದ ಗೊನೆ ಕಡಿಯಲಾಯಿತು.

ಈ ಸಂದರ್ಭದಲ್ಲಿ ಈಶ್ವರಪ್ಪ ಗೌಡ ಬಳ್ಳಡ್ಕ, ಬೆಳ್ಯಪ್ಪ ಬಳ್ಳಡ್ಕ, ಶಿವರಾಮ ಬಿ.ಎಲ್. ಬಳ್ಳಡ್ಕ, ಲಕ್ಷ್ಮಣ ಬಳ್ಳಡ್ಕ, ಪುರುಷೋತ್ತಮ ಬಳ್ಳಡ್ಕ, ಪದ್ಮಯ್ಯ ಬಳ್ಳಡ್ಕ, ಅನಿಲ್ ಬಳ್ಳಡ್ಕ, ರತ್ನಾಕರ ಗೌಡ ಬಳ್ಳಡ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.