ಮುಡ್ನೂರು ಮರ್ಕಂಜ ಶಾಲೆಯಲ್ಲಿ ದಾನಿಗಳ ನೆರವಿನಿಂದ ನೂತನವಾಗಿ ನಿರ್ಮಾಣವಾದ ಭೋಜನಾಲಯ ಲೋಕಾರ್ಪಣೆ

0

ಸಹಾಯಕ ಕಮೀಷನರ್ ರವರಿಂದ ಭೋಜನಾಲಯದ ಉದ್ಘಾಟನೆ

ಸರಕಾರದ ಅನುದಾನಕ್ಕೆ ಕಾಯದೇ ದಾನಿಗಳ ಮೂಲಕ ಮಾಡಿರುವ ಅಭಿವೃದ್ಧಿ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆ : ಎ.ಸಿ. ಶ್ಲಾಘನೆ

ಇಂತಹ ಗ್ರಾಮೀಣ ಪ್ರದೇಶದಲ್ಲಿ ಸರಕಾರದ ಅನುದಾನವನ್ನು ಕಾಯದೇ ಪೋಷಕರೆಲ್ಲಾ ಸೇರಿ ದಾನಿಗಳ ಮೂಲಕ ಸರಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಿರುವುದು ಶ್ಲಾಘನೀಯವಾಗಿದೆ. ಸರಕಾರಿ ಶಾಲೆಯ ಮೇಲೆ‌ ಪ್ರೀತಿ, ಅಭಿಮಾನವಿಟ್ಟು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಶಾಲಾಭಿವೃದ್ಧಿ ಸಮಿತಿ ಮಾದರಿಯಾಗಿದೆ ಎಂದು ದ.ಕ. ಜಿಲ್ಲಾ ಪುತ್ತೂರು ಉಪ ವಿಭಾಗದ ಸಹಾಯಕ ಕಮೀಷನರ್ ಜುಬೀನ್ ಮಹಾಪಾತ್ರ ಹೇಳಿದರು.

ಅವರು ದ.ಕ. ಜಿಲ್ಲಾ ಪಂಚಾಯತ್ ಸ.ಹಿ.ಪ್ರಾ.ಶಾಲೆ ಮುಡ್ನೂರು ಮರ್ಕಂಜ, ಅಭಿವೃದ್ಧಿ ನಿರ್ವಾಹಣ ಸಮಿತಿ ಹಾಗೂ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ನಿರ್ಮಾಣವಾದ ಶ್ರೀ ಅನ್ನಪೂರ್ಣೇಶ್ವರಿ ಭೋಜನಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಬಳಿಕ ದುರಸ್ಥಿಗೊಳಿಸಿ, ಅಕ್ಷರ ಮಾಲೆಗಳನ್ನು ಚಿತ್ರಿಸಿದ ನಲಿಕಲಿ ಕೊಠಡಿಯನ್ನು ವೀಕ್ಷಿಸಿದರು.
ಸುಳ್ಯ ತಹಶೀಲ್ದಾರ್ ಜಿ. ಮಂಜುನಾಥ್ ಇವರು ಉಪಸ್ಥಿತರಿದ್ದರು. ‌

ತಾಲೂಕು ಪಂಚಾಯತ್ ಅನಿರ್ಬಂಧಿತ ಅನುದಾನ 2023-24ರ ಅನುದಾನದಲ್ಲಿ‌ ನಿರ್ಮಾಣವಾದ ಡಿಜಿಟಲ್ ಗ್ರಂಥಾಲಯದ ಉದ್ಘಾಟನೆಯನ್ನು ಮಾಜಿ ಸಚಿವರಾದ ಎಸ್.ಅಂಗಾರ ನೆರವೇರಿಸಿದರು.

ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮೀನಾಕ್ಷಿ ಬೊಮ್ಮೆಟ್ಟಿ ವಹಿಸಿದ್ದರು. ‌

ಕಾರ್ಯಕ್ರಮ ದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಸಂತರ ಸಮಿತಿ ಇದರ‌ ಅಧ್ಯಕ್ಷರು, ಮರ್ಕಂಜದ ದೇಶೆಕೋಡಿ ಶ್ರೀ ಅನ್ನಪೂರ್ಣೇಶ್ವರಿ ಸಿದ್ಧ ಮಠದ ಧರ್ಮದರ್ಶಿಗಳಾದ ರಾಜೇಶ್ ನಾಥ್ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ‌

ಶಾಲಾ‌ಮುಖ್ಯೋಪಾಧ್ಯಾಯರಾದ ದೇವರಾಜ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.‌

ವೇದಿಕೆಯಲ್ಲಿ ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಗೀತಾ‌ ಹೊಸೊಳಿಕೆ, ನಿವೃತ್ತ ಪ್ರಾಂಶುಪಾಲರು ಹಾಗೂ ದೃಷ್ಠಿ ಚಾರಿಟೇಬಲ್ಸ್ ಬೆಂಗಳೂರು ಇಲ್ಲಿಯ ಬಾಲಕೃಷ್ಣ ಭಟ್ ಕೊಡೇಂಕಿರಿ, ಗ್ರಾ.ಪಂ. ಸದಸ್ಯರಾದ ಗೋವಿಂದ ಅಳವುಪಾರೆ, ಚಿತ್ತರಂಜನ್ ಕೋಡಿ, ಅಭಿವೃದ್ಧಿ ನಿರ್ವಾಹಣಾ ಸಮಿತಿಯ ಅಧ್ಯಕ್ಷರಾದ ಹೇಮಕುಮಾರ್ ಜೋಗಿಮೂಲೆ, ಸಂಚಾಲಕ ಜಗನ್ನಾಥ ಜಯನಗರ, ಹಿರಿಯ‌ ವಿದ್ಯುರ್ಥಿ ಸಂಘದ ಅಧ್ಯಕ್ಷರಾದ ನವೀನ ನಳಿಯಾರು, ಡೆಲ್ಮಾ ಎಂಟರ್ ಪ್ರೈಸಸ್ ನ ತಮ್ಮಪ್ಪ ಗೌಡ ಪೂಂಬಾಡಿ, ಎಸ್.ಡಿ.ಎಂ‌.ಸಿ.ರಾಜ್ಯಾಧ್ಯಕ್ಷರಾದ ಉಮೇಶ್ ಗಂಗವಾಡಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಅನಿಲ್ ಅಂಬೆಕಲ್ಲು, ನಿವೃತ್ತ ಶಿಕ್ಷಕರಾದ ಹೊನ್ನಪ್ಪ ಗೌಡ ಅಡ್ತಲೆ, ಅಂಬೇಡ್ಕರ್ ರಕ್ಷಣ ವೇದಿಕೆ ಅರಂತೋಡು ವಲಯದ ಅಧ್ಯಕ್ಷ ನವೀನ್ ಕಲ್ಲುಗುಂಡಿ ಉಪಸ್ಥಿತರಿದ್ದರು. ‌

ಶಿಕ್ಷಕಿ ಅಶ್ವಿನಿ ಮುಂಡೋಡಿ ವರದಿ ವಾಚಿಸಿದರು.

ನಿತ್ಯಾನಂದ ಭೀಮಗುಳಿ ಮತ್ತು ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ನಿಶಾ ಕೆ. ಸಾವಿತ್ರಿ ಬಹುಮಾನಿತರ ಪಟ್ಟಿ ವಾಚಿಸಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಪದ್ಮಾ ಲೋಕೇಶ್ ರವರು ಕೊಡಮಾಡಿದ ಬಡಿಸುವ ಕೈ ಗಾಡಿಯ ಹಸ್ತಾಂತರ ನಡೆಯಿತು.

ಮಕ್ಕಳ ಪರವಾಗಿ ಉಜ್ವಲ್ ಅನಿಸಿಕೆ ವ್ಯಕ್ತಪಡಿಸಿದನು.

ಇದೇ ಸಂದರ್ಭದಲ್ಲಿ ದಾನಿಗಳನ್ನು, ಶಿಕ್ಷಕರನ್ನು ಸಹಕರಿಸಿದವರನ್ನು‌ ಸನ್ಮಾನಿಸಲಾಯಿತು.