ಕೆಲಸ ಮಾಡುತ್ತಿದ್ದಾಗ ಮೇಲಿನಿಂದ ಬಿದ್ದು ಯುವಕ ಜಖಂ

0

ಮನೆಯೊಂದರಲ್ಲಿ ಕಟ್ಟಡದ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿರುವಾಗ ಸುಳ್ಯ ಜಯನಗರದ ಪ್ರಸನ್ನ ಎಂಬ ಯುವಕ ಕೆಳಕ್ಕೆ ಬಿದ್ದು ಜಖಂಗೊಂಡಿರುವ ಘಟನೆ ನಿನ್ನೆ ವರದಿಯಾಗಿದೆ.
ಎತ್ತರದಿಂದ ಕೆಳಕ್ಕೆ ಬಿದ್ದ ಕಾರಣ ತಲೆಗೆ ಏಟಾಗಿದ್ದು, ಮೂರ್ಛೆ ಹೋಗಿರುವ ಯುವಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳದು ಬಂದಿದೆ.