ಆರೆಂಬಿ ತರವಾಡು ಮನೆ ಶ್ರೀ ಧರ್ಮ ದೈವ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ

0


ಎಣ್ಮೂರು ಗ್ರಾಮದ ಆರೆಂಬಿ ತರವಾಡು ಮನೆಯ ಶ್ರೀ ಧರ್ಮ ದೈವ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವವವು ನಡೆಯಿತು. ಕೆಮಿಂಜೆ ಬ್ರಹ್ಮಶ್ರೀ ನಾಗೇಶ್ ತಂತ್ರಿ ಗಳವರ ನೇತೃತ್ವದಲ್ಲಿ ಫೆ.13ರಂದು ದೇವತಾ ಪ್ರಾರ್ಥನೆ, ಆಚಾರ್ಯ ವರಣೆ, ಪ್ರಸಾದ ಪರಿಗ್ರಹ, ಸ್ವಸ್ತಿ ಪುಣ್ಯಾಹ ವಾಚನ, ಸ್ಥಳ ಶುದ್ದಿ, ಪ್ರಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಪ್ರಕಾರ ಬಲಿ, ಪ್ರಸಾದ ವಿತರಣೆ ನಡೆಯಿತು.

ಫೆ.14 ರಂದು ಬೆಳಗ್ಗೆ ಮಹಾ ಗಣಪತಿ ಹೋಮ, ಪಂಚವಿಶಂತಿ ಪೂಜೆ, ನಾಗ ತಂಬಿಲ, ಬಳಿಕ ಪಿಲಿ ಚಾಮುಂಡಿ ಮತ್ತು ರುದ್ರ ಚಾಮುಂಡಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ನಡೆದು, ಪಂಚವಿಶಂತಿ,ಸಾನಿಧ್ಯ ಕಲಶಾ ಭಿಷೇಕ, ತಂಬಿಲ ಸೇವೆ ನಡೆಯಿತು. ವೆಂಕಟಪ್ಪ ದಾಸರರವರ ನೇತೃತ್ವ ದಲ್ಲಿ ವೆಂಕಟ್ರಮಣ ದೇವರ ಹರಿ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಅದೇ ರಾತ್ರಿ ದೈವಗಳ ಭಂಡಾರ ತೆಗೆದು, ಸತ್ಯ ದೇವತೆ, ಪಿಲಿ ಚಾಮುಂಡಿ, ಕಲ್ಲುರ್ಟಿ ಕುಪ್ಪೆ ಪಂಜುರ್ಲಿ ನೇಮ ನಡೆಯಿತು. ಫೆ. 15 ರಂದು, ಬೆಳಗ್ಗೆ ಧರ್ಮದೈವ ಚಾಮುಂಡಿ, ವರ್ಣಾರ ಪಂಜುರ್ಲಿ ಹಾಗೂ ಗುಳಿಗ ದೈವದ ನೇಮ ನಡೆದು ಪ್ರಸಾದ ವಿತರಣೆ, ಮಹಾ ಅನ್ನ ಸಂತರ್ಪಣೆ ನಡೆಯಿತು.