ಫೆ 19 : ಸಂಕೇಶ್- ಪೇರಾಲಿನಲ್ಲಿ ಸಯ್ಯದ್ ಆಟ್ಟು ಉಪ್ಪಾಪ ತಂಙಳ್ ರವರ ಆಂಡ್ ನೇರ್ಚೆ ಹಾಗೂ ಏಕದಿನ ಧಾರ್ಮಿಕ ಉಪನ್ಯಾಸ

ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿ, ಸಂಘಟಕರಿಂದ ಪತ್ರಿಕಾಗೋಷ್ಠಿ

0

ಸುಳ್ಯ ಸಂಕೇಶ್ ಮಜ್ಲಿಸ್ ಪೇರಾಲ್ ಇದರ ವತಿಯಿಂದ ಫೆಬ್ರವರಿ 19 ರಂದು ಆದೂರು ಸಯ್ಯದ್ ಆಟ್ಟು ಉಪ್ಪಾಪ ತಂಙಳ್ ರವರ ಹೆಸರಿನಲ್ಲಿ ಅಂಡ್ ನೇರ್ಚೆ ಹಾಗೂ ಏಕದಿನ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ ಅಜ್ಜಾವರ ಗ್ರಾಮದ ಸಂಕೇಶ್ ಪೇರಾಲಿನಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರಲ್ಲಿ ಓರ್ವರಾದ ಅಡ್ವಕೇಟ್ ಮೂಸಾ ಕುಂಞಿ ಪೈಂಬೆಚ್ಚಾಲು ರವರು ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಕಳೆದ ಎಂಟು ವರ್ಷಗಳಿಂದ ದೇಶದ ವಿವಿಧ ಭಾಗಗಳಿಂದ ಬೇರೆ ಬೇರೆ ರೀತಿಯ ಕಾಯಿಲೆಗಳಿಂದ ಬಳಲಿ ಬರುವ ರೋಗಿಗಳಿಗೆ ಶಮನ ಲಭಿಸುವ ಒಂದು ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆದು ಬಂದಿರುವ ಸಂಕೇಶ್ ಮಜ್ಲೀಸ್ ಇಂದು ಸಾವಿರಾರು ಮಂದಿ ರೋಗಿಗಳಿಗೆ ಆಶಾ ಕೇಂದ್ರವಾಗಿ ಬೆಳೆದು ನಿಂತ್ತಿದೆ. ಕಾಸರಗೋಡು ಜಿಲ್ಲೆಯ ಸಯ್ಯಿದ್ ಆದೂರು ಆಟ್ಟು ತಂಗಳ್ ರವರ ಹೆಸರಿನಲ್ಲಿ ನಡೆಸುವ ಪ್ರಾರ್ಥನಾ ಮಜ್ಲೀಸ್ ಇಂದು ಹಲವಾರು ರೋಗಿಗಳ ಕಷ್ಟಕಾರ್ಪಣ್ಯಗಳ ಪರಿಹಾರ ಕೇಂದ್ರವಾಗಲು ಕಾರಣವಾಗಿದೆ. ಇದರ ನೇತೃತ್ವವನ್ನು ಅಬ್ದುಲ್ ಕುಂಞಿ ಸಂಕೇಶ್ ರವರು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಆಂಡ್ ನೇರ್ಚೆ ಮತ್ತು ಏಕ ದಿನ ಧಾರ್ಮಿಕ ಉಪನ್ಯಾಸದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಜ್ಲೀಸ್ ನ ಸ್ಥಾಪಕ ಅಧ್ಯಕ್ಷ ಅಬ್ದುಲ್ ಕುಂಞಿ (ಸಂಕೇಶ್) ವಹಿಸಲಿದ್ದು ,ಮುಖ್ಯ ಪ್ರಭಾಷಣವನ್ನು ಕೇರಳದ ಸುಪ್ರಸಿದ್ಧ ಖ್ಯಾತವಾಗ್ಮಿ ಬಹು। ಆಬಿದ್ ಹುದವಿ ತಚ್ಚನ್ನ ನಿರ್ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ,ಫಾರೂಖ್ ಸಅದಿ ತಿಂಗಳಾಡಿ,ಮೊಹಿದೀನ್ ಕುಟ್ಟಿ ಅಶ್ರಫಿ ಕೇರಳ,ಅಬ್ದುಲ್ ಅಝೀಝ್ ಸಖಾಫಿ ಮಾವೂರು, ಕೇರಳ,ಇಸ್ಮಾಯಿಲ್ ಮುಸ್ಲಿಯಾರ್ ಕೇರಳ, ನಸೀರ್ ಮುಸ್ಲಿಯಾರ್ ಕೇರಳ ಮುಂತಾದ ಧಾರ್ಮಿಕ ಪಂಡಿತರು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜಕೀಯ ಸಾಮಾಜಿಕ ಮುಖಂಡರುಗಳಾದ ಹೇಮನಾಥ ಶೆಟ್ಟಿ ಕಾವು ಸುಕುಮಾರ್ ಕೋಡ್ತುಗುಳಿ, ವಕೀಲರು ಸುಳ್ಯ,ಸದಾನಂದ ಮಾವಜಿ ಪ್ರ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್ ಸುಳ್ಯ,ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷರು ತೆಕ್ಕಿಲ್ ಪ್ರತಿಷ್ಠಾನ ,ಹಾಜಿ ಆದಂ ಕಮ್ಮಾಡಿ ಉದ್ಯಮಿಗಳು ಸುಳ್ಯ,ಇಕ್ಬಾಲ್ ಬಾಳಿಲ ಸಾಮಾಜಿಕ ಕಾರ್ಯಕರ್ತರು ಬೆಳ್ಳಾರೆ,ಎಸ್. ಸಂಶುದ್ದೀನ್ ಅರಂಬೂರು ಮಾಜಿ ಅಧ್ಯಕ್ಷರು ನ.ಪಂ.ಸುಳ್ಯ,ಹಾಜಿ ಪಿ.ಎ.ಮಹಮ್ಮದ್ ಮಾಜಿ ನಿರ್ದೇಶಕರು ಕೆಪೆಕ್ ಕರ್ನಾಟಕ ಸರಕಾರ, ಹಿರಿಯರಾದ ಹಾಜಿ ಇಬ್ರಾಹಿಂ ಸಂಕೇಶ್ ಹಾಗೂ ಇನ್ನಿತರ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆ, ಕೊಡಗು,ಕಾಸರಗೋಡು ಬೆಂಗಳೂರು,ಕೇರಳ ಮಲಪುರಂ ಜಿಲ್ಲೆಗಳಿಂದಲೂ ಜಾತಿ ಮತ ಬೇದಭಾವವಿಲ್ಲದೆ ನೂರಾರು ಮಂದಿ ವಿಶ್ವಾಸಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದ್ದು ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ಇರುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಕೇಶ್ ಮಜ್ಲೀಸ್ ಸ್ಥಾಪಕ ಅಧ್ಯಕ್ಷ ಅಬ್ದುಲ್ ಕುಂಞಿ ಸಂಕೇಶ್,ಹಾಜಿ ಅಬ್ದುಲ್ಲಾ ಜಯನಗರ ಉಪಸ್ಥಿತರಿದ್ದರು.