ಕಳಂಜಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥ

0

ಗ್ರಾ.ಪಂ ಆಡಳಿತದಿಂದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಹಾರಾರ್ಪಣೆ

ಸಂವಿಧಾನದ ಮೌಲ್ಯಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ರಥವು ಕಳಂಜ ಗ್ರಾಮಕ್ಕೆ ಫೆ.19ರಂದು ಆಗಮಿಸಿದಾಗ ತಂಬಿನಡ್ಕ ಬಳಿಯಿಂದ ಸ್ವಾಗತಿಸಲಾಯಿತು.


ಬಳಿಕ ಮೆರವಣಿಗೆ ಮೂಲಕ ಸಾಗಿ ಅಯ್ಯನಕಟ್ಟೆ ಯ ದೀನ್ ದಯಾಳ್ ಆಗಮಿಸಿ ಕಾರ್ಯಕ್ರಮ ಮಾಡಲಾಯಿತು.
ಶಾಲಾ ಮಕ್ಕಳು ಡಾ.ಬಿ.ಆರ್ ಅಂಬೇಡ್ಕರ್, ಭಾರತ ಮಾತೆ, ಸೈನಿಕರ ವೇಷ ಭೂಷಣ ತೊಟ್ಟು ಪಾಲ್ಗೊಂಡರು. ಸಂವಿಧಾನ ಜಾಗೃತಿ ಜಾಥಾದ ಪ್ರತಿಜ್ಞೆ ಮಾಡಲಾಯಿತು.


ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಉಪಾಧ್ಯಕ್ಷೆ ಪುಷ್ಪಲತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಕಳಂಜ ಗ್ರಾ.ಪಂ ಸದಸ್ಯರು, ಸ್ಥಳೀಯ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾ.ಪಂ ವ್ಯಾಪ್ತಿಯ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.