ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ 52ನೇ ವರ್ಷದ ಏಕಹಾ ಭಜನೆ

0

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ 52ನೇ ವರ್ಷದ ಏಕಹಾ ಭಜನೆಯು ಮಂದಿರದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ವಾರಂಬಳಿತ್ತಾಯ ಮತ್ತು ಮನೋಜ್ ಕಲ್ಲೂರಾಯರ ನೇತೃತ್ವದಲ್ಲಿ ಫೆ.20ರಂದು ಜರುಗಿತು.
ಬೆಳಿಗ್ಗೆ ದೀಪ ಪ್ರತಿಷ್ಠೆಯೊಂದಿಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆಯು ನಡೆಯುತ್ತಿದ್ದು, ಮಧ್ಯಾಹ್ನ ಶ್ರೀ ಆತ್ಮಾರಾಮ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ವಸಂತ ಮಳಿ, ಕಾರ್ಯದರ್ಶಿ ಈಶ್ವರ ಕೊರ್ಬಂಡ್ಕ ಸೇರಿದಂತೆ ಭಜನಾ ಮಂದಿರದ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ರಾತ್ರಿ ಕನಕಮಜಲಿನ ನೆಡಿಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ, ಪಲ್ಲತ್ತಡ್ಕ ದೈವಸ್ಥಾನ, ಕಣಜಾಲು ದೈವಸ್ಥಾನ ಹಾಗೂ ಪೂಜಾರಿಮನೆ ತರುವಾಡು ಮನೆಯಿಂದ ಶ್ರೀ ಆತ್ಮಾರಾಮ ಭಜನಾ ಮಂದಿರಕ್ಕೆ ಉಲುಪೆ ಮೆರವಣಿಗೆಯ ಮೂಲಕ ಸಾಗಿ ಬಂದು ಸಮರ್ಪಣೆಗೊಳ್ಳಲಿದೆ.