ಇಂದಿನಿಂದ ಫೆ.22 ರ ತನಕ ಹರಿಹರೇಶ್ವರ ದೇವಸ್ಥಾನದ ಜಾತ್ರೋತ್ಸವ

0

ಹಸಿರುವಾಣಿ ಸಮರ್ಪಣೆ

ಹರಿಹರ ಪಲ್ಲತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವವು ಇಂದು ಆರಂಭವಾಗಿದ್ದು ಫೆ.22 ರವರೆಗೆ ನಡೆಯಲಿರುವುದು.

ಇಂದು ಬೆಳಗ್ಗೆ  ಹಸಿರು ಕಾಣಿಕೆ ಸಂಗ್ರಹ ಸಂರ್ಪಣೆ ನಡೆದಿದ್ದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.  ಸಾಯಂಕಾಲ ತಂತ್ರಿಗಳ ಆಗಮನ ವಾಗಲಿದ್ದು ರಾತ್ರಿ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.


ಫೆ. 21ರಂದು ಬೆಳಿಗ್ಗೆ ಗಣಪತಿ ಹವನ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ದೀಪಾರಾಧನೆ, ಚೆಂಡೆವಾದನ, ರಾತ್ರಿ ಮಹಾಪೂಜೆ, ರಾತ್ರಿ ದೇವರಬಲಿ ಉತ್ಸವ ಹೊರಡುವುದು, ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆಯಲಿರುವುದು.
ಫೆ. 22ರಂದು ಬೆಳಗ್ಗೆಯಿಂದ ಸಾಯಂಕಾಲ ತನಕ ಉಳ್ಳಾಗುಳು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿರುವುದು.

ಸಾಂಸ್ಕೃತಿಕ ಕಾರ್ಯಕ್ರಮ: ಫೆ.20 ರ ಸಂಜೆ 6.00 ರಿಂದ ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಲಿರುವುದು. ಬಳಿಕ ಸ.ಕಿ.ಪ್ರಾ.ಶಾಲೆ ಕರಂಗಲ್ಲು ಇವರಿಂದ ಏಕಾದಶಿ ದೇವಿ ಮಹಾತ್ಮೆ ಕಾರ್ಯಕ್ರಮ ನಡೆಯಲಿದೆ. ಬಳಿಕ 8 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆಯಲಿವೆ. ಅಕ್ಷರಗಾನ ಸುಧೆ ತಂಡ ಕುಕ್ಕೆ ಸುಬ್ರಹ್ಮಣ್ಯ ಇವರಿಂದ ಸಂಗೀತ ರಸಮಂಜರಿ ನಡೆಯಲಿದೆ. ಆ ಬಳಿಕ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕಾಸರಗೋಡು ಇವರಿಂದ “ನರಕಸುರ ವಧೆ – ಗರುಡ ಗರ್ವಭಂಗ ಯಕ್ಷಗಾನ ಗೊಂಬೆಯಾಟ ನಡೆದು ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


ಫೆ.21 ರ ಬೆಳಗ್ಗೆ 6.00 ರಿಂದ ಸಂಜೆ 6.00 ಗಂಟೆ ವರೆಗೆ ಅರ್ಧ ಏಕಾಹ ಭಜನೆ ನಡೆಯಲಿದೆ. ಸಂಜೆ 6.00 ರಿಂದ ಬಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸುಳ್ಯ ಇವರಿಂದ ಶ್ರೀ ಸತ್ಯನಾರಾಯಣ ಸತ್ಯಕಥೆ ರೂಪಕ ನಡೆಯಲಿದೆ.