ಬಹುಮಾನದ ಮೊತ್ತ ಮಗುವಿನ ಶಸ್ತ್ರ ಚಿಕಿತ್ಸೆಗೆ ವಿನಿಯೋಗ

0

ಮಾನವೀಯತೆ ಮೆರೆದ ಕಲ್ಲುಗುಂಡಿ ಯಶಸ್ವಿ ಯುವಕ ತಂಡ

ಕಲ್ಲುಗುಂಡಿಯಲ್ಲಿ ನಡೆದ ಕೆ ಪಿ ಎಲ್ ೭ ಕ್ರಿಕೆಟ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ಟ್ರೋಫಿಯನ್ನು ಅಲಂಕರಿಸಿಕೊಂಡ ಸ್ಥಳೀಯ ಯಶಸ್ವಿ ಯುವಕ ತಂಡವು ಬಹುಮಾನದಲ್ಲಿ ಬಂದ ಮೊತ್ತವನ್ನು ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಪುಟ್ಟ ಮಗುವಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಚೆಂಬು ಗ್ರಾಮದ ಆನ್ಯಾಳ ಅಜಿತ್‌ಎಸ್ ಹಾಗೂ ಅನುಪಮಾ ದಂಪತಿಗಳ ಪುತ್ರಿ ಆರ್ವಿ (೪ ವರ್ಷ) ಪುಟ್ಟ ಮಗು ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.


ಇದೀಗ ಮಗುವಿಗೆ ಶಸ್ತ್ರ ಚಿಕಿತ್ಸೆಗೆ ಸುಮಾರು ೫ ಲಕ್ಷ ರೂಪಾಯಿ ಅವಶ್ಯಕತೆ ಇದ್ದು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಕುಟುಂಬ ಮಗುವಿನ ಚಿಕಿತ್ಸೆಯ ವೆಚ್ಚಕ್ಕಾಗಿ ದಾನಿಗಳ ಸಹಕಾರವನ್ನು ಪಡೆಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದ ಮೊತ್ತವನ್ನು ಮಗುವಿನ ಚಿಕಿತ್ಸೆಗೆ ನೀಡಿ ಸಹಕರಿಸಿದ್ದಾರೆ.
ಯುವಕ ಮಂಡಲದ ಸದಸ್ಯರ ಈ ಕಾರ್ಯ ವೈಖರಿ ಸ್ಥಳೀಯ ಜನತೆಯಿಂದ ಪ್ರಸಂಶೆಗೆ ಪಾತ್ರವಾಗಿದೆ.ಇನ್ನೂ ಕೂಡಾ ಚಿಕಿತ್ಸೆಗೆ ಈ ಬಡ ಕುಟುಂಬಕ್ಕೆ ಆರ್ಥಿಕ ನೆರವು ಬೇಕಾಗಿದ್ದು ದಾನಿಗಳು ಸಹಕರಿಸುವಂತೆ ಮನೆಯ ಸದಸ್ಯರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಅಜಿತ್ ಎಸ್ : ಮೊ : ೯೯೪೫೯೨೪೨೦೧.