ಮೇನಾಲ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ : ಬಂಟರ ಸಂಘದಿಂದ ಶ್ರಮ ಸೇವೆ

0

ಅಜ್ಜಾವರ ಗ್ರಾಮದ ಮೇನಾಲದಲ್ಲಿ ಮಾ.5,6 ಮತ್ತು 7ರಂದು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ನಡೆಯಲಿದ್ದು, ಉತ್ಸವ ನಡೆಯುವ ಜಾಗದಲ್ಲಿ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಶ್ರಮ ಸೇವೆ ನಡೆಯುತ್ತಿದ್ದು, ಫೆ.23ರಂದು ಸುಳ್ಯದ ಬಂಟರ ಸಂಘದವರು ಶ್ರಮದಾನ ನಡೆಸಿದರು.

ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರು ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರಮ ಸೇವೆಯಲ್ಲಿ ‌ಭಾಗವಹಿಸಿದರು.