ಪಂಜ: ಶ್ರೀ ಆದಿ ಬೈದೇರುಗಳ ನೇಮೋತ್ಸವ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಶ್ರೀ ಆದಿ ಬೈದೇರುಗಳ ಗರಡಿಯಲ್ಲಿ
ಫೆ.23.ರಂದು ಶ್ರೀ ಆದಿ ಬೈದೇರುಗಳ ನೇಮೋತ್ಸವವು ಜರುಗಿತು.

ರಾತ್ರಿ ಬೈದೇರುಗಳು ಗರಡಿ ಇಳಿದು ದೇವಳಕ್ಕೆ ತೆರಳಿ ಶ್ರೀ ದೇವರಿಗೆ ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.ಬಳಿಕ ರಂಗ ಸ್ಥಳ ಪ್ರವೇಶ ,ಕಿನ್ನಿದಾರು ಇಳಿದು ರಂಗಸ್ಥಳ ಪ್ರವೇಶ , ಉತ್ಸವ ಜರುಗಿತು.ಪ್ರಸಾದ ವಿತರಣೆ,ರಾತ್ರಿ ಅನ್ನಸಂತರ್ಪಣೆ ನಡೆಯಿತು.

ದೇವಳದ ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ,ಉತ್ಸವ ಸಮಿತಿಯ ಸದಸ್ಯರು, ಸೀಮೆಯ ಭಕ್ತರು ಪಾಲ್ಗೊಂಡಿದ್ದರು.

ಶ್ರೀ ದೇವರಿಗೆ ರಂಗ ಪೂಜೆ
ಫೆ.22.ರಂದು ರಾತ್ರಿ ಶ್ರೀ ದೇವರಿಗೆ ರಂಗಪೂಜೆ , ಬೀದಿ ನೇಮ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಯವರ ನೇತೃತ್ವದಲ್ಲಿ ಜರುಗಿತು. ರಂಗ ಪೂಜೆ ಬಳಿಕ ಶ್ರೀ ದೇವರ ಬಲಿ ,ದೈವಗಳ ನೇಮ , ಪ್ರಸಾದ ವಿತರಣೆ ,ಅನ್ನಸಂತರ್ಪಣೆ ಜರುಗಿತು.ದೇವಳದ ಉತ್ಸವ ಸಮಿತಿಯವರು, ಸೀಮೆಯ ನೂರಾರು ಭಕ್ತರು ಪಾಲ್ಗೊಂಡಿದ್ದರು.
.