ಅರಂತೋಡು ಜಮಾಅತ್ ವತಿಯಿಂದ ಉಮ್ರಾ ಯಾತ್ರಿ ಇಬ್ರಾಹಿಂ ಕುಕ್ಕುಂಬಳರವರಿಗೆ ಬೀಳ್ಕೊಡುಗೆ

0

ಅರಂತೋಡು ಜುಮ್ಮಾ ಮಸೀದಿಯ ದಿಕ್ರ್ ಸ್ವಲಾತ್ ಸಮಿತಿಯ ಉಪಾಧ್ಯಕ್ಷ ಕೆ.ಎಸ್. ಇಬ್ರಾಹಿಂ ಕುಕ್ಕುಂಬಳ ಬಿಳಿಯಾರು ಅವರು ಪವಿತ್ರ ಉಮ್ರಾ ಯಾತ್ರೆ ಪ್ರಯಾಣ ಬೆಳೆಸಿದ್ದು ಅವರನ್ನು ಅರಂತೋಡು ಜಮಾಅತ್ ಸಮಿತಿ ವತಿಯಿಂದ ಬೀಳ್ಕೊಡಲಾಯಿತು.

ನೌಶಾದ್ ಅಝ್ ಹರಿ ದುವಾ ನೆರವೇರಿಸಿದರು. ಕಾರ್ಯದರ್ಶಿ ಕೆ.ಎಂ. ಮೂಸಾನ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿಶಾಫಿ ಮುಸ್ಲಿಯಾರ್, ಉಪಾಧ್ಯಕ್ಷ ಹಾಜಿ ಕೆ.ಎಂ. ಮಹಮ್ಮದ್, ಕೋಶಾಧಿಕಾರಿ ಕೆ.ಎಂ. ಅಬೂಬಕ್ಕರ್ ಪಾರೆಕ್ಕಲ್, ಎ.ಹನೀಫ್, ಕೆ.ಎಂ. ಮೊಯಿದು ಕುಕ್ಕುಂಬಳ, ಅಮೀರ್ ಕುಕ್ಕುಂಬಳ, ಸಂಶುದ್ಧೀನ್ ಪೆಲ್ತಡ್ಕ, ಮುಜೀಬ್ ಅರಂತೋಡು, ಸಂಶುದ್ಧೀನ್ ಕೆ.ಎ.ಯು. ಜುಬೈರ್ ಎಸ್.ಇ, ಮೊಯಿದು ಕುಟ್ಟಿ ಮೊದಲಾದವರು ಉಪಸ್ಥಿತರಿದ್ದರು.