ಸುಳ್ಯ ಅರಣ್ಯ ಇಲಾಖೆಯ ವಸತಿ‌ ಸಮುಚ್ಚಯಕ್ಕೆ ಶಿಲಾನ್ಯಾಸ

0

ಅರಣ್ಯ ಇಲಾಖೆ ಸುಳ್ಯ ವಲಯದ ಅರಂಬೂರು ಕೇಂದ್ರೀಯ ನಾಟ ಸಂಗ್ರಹಲಯದ ಆವರಣದ ಒಳಗಡೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ನಿರ್ಮಾಣವಾಗಲಿರುವ ವಸತಿ ಸಮುಚ್ಚಯದ ಭೂಮಿ ಪೂಜೆ ಫೆ.24ರಂದು ನಡೆಯಿತು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೂಮಿ ಪೂಜೆ ನೆರವೇರಿಸಿ, ಶುಭಹಾರೈಸಿದರು. ಆಲೆಟ್ಟಿ‌ ಗ್ರಾ.ಪಂ. ಅಧ್ಯಕ್ಷೆ ವೀಣಾ ವಸಂತ್, ಅಕ್ರಮ ಸಕ್ರಮ‌ ಸಮಿತಿ ಸದಸ್ಯೆ ಗೀತಾ ಕೋಲ್ಚಾರ್, ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ಸುಳ್ಯ ರೇಂಜರ್ ಮಂಜುನಾಥ್ ಎನ್., ಸುಬ್ರಹ್ಮಣ್ಯ ರೇಂಜರ್ ವಿಮಲ್ ಬಾಬು, ಗುತ್ತಿಗೆದಾರರು ಇದ್ದರು.

95 ಲಕ್ಷ ರೂ ವೆಚ್ಚದಲ್ಲಿ ಎರಡು ಮಹಡಿಯ ಕಟ್ಟಡ ನಿರ್ಮಾಣವಾಗಲಿದ್ದು, ನಾಲ್ಕು ವಸತಿಗಳು ಇಲ್ಲಿ ಇರಲಿದೆ.