ಹಾವನ್ನು ತುಳಿಯಲಿದ್ದ ಮಗುವನ್ನು ರಕ್ಷಿಸಿದ ಶ್ವಾನ !

0

ಸುಬ್ರಹ್ಮಣ್ಯದಲ್ಲಿ ನಡೆದ ಘಟನೆ

ಹಾವನ್ನು ತುಳಿಯಲಿದ್ದ ಮಗುವನ್ನು ಶ್ವಾನವೊಂದು ರಕ್ಷಿಸಿದ ಘಟನೆ ಸುಬ್ರಹ್ಮಣ್ಯದಿಂದ ಫೆ. ೨೬ರಂದು ವರದಿಯಾಗಿದೆ.ಆದಿ ಸುಬ್ರಹ್ಮಣ್ಯದಲ್ಲಿ ಬೀದಿನಾಯಿ ಕರಿಯ ಎಂದೇ ಎಲ್ಲರಿಗೂ ಚಿರಪರಿಚಿತವಾಗಿರುವ ನಾಯಿ ಇದಾಗಿದ್ದು, ಇದೀಗ ಮಗುವಿನ ರಕ್ಷಣೆ ಮಾಡಿದೆ.

ಟೂರಿಸ್ಟ್ ಹೆಂಗಸು ಒಬ್ಬರು ಆದಿ ಸುಬ್ರಹ್ಮಣ್ಯ ಬಳಿ ಚಿಕ್ಕ ಮಗುವನ್ನು ರಸ್ತೆಯಲ್ಲಿ ಬಿಟ್ಟು ಹಣ್ಣುಕಾಯಿ ತೆಗೆದುಕೊಳ್ಳುವ ಸಮಯದಲ್ಲಿ ಮಗು ರಸ್ತೆಗೆ ಬಂದಿದ್ದು ಅದೇ ಸಮಯಕ್ಕೆ ನಾಗರಹಾವೊಂದು ರಸ್ತೆದಾಟುತ್ತಿತ್ತು. ಮಗು ಇನ್ನೇನು ಹಾವನ್ನು ತುಳಿಯಬೇಕು ಅನ್ನುವಷ್ಟರಲ್ಲಿ ಅಲ್ಲಿಯೇ ಮಲಗಿದ್ದ ನಾಯಿ ಓಡಿ ಹೋಗಿ ಮಗುವಿಗೆ ಅಡ್ಡಲಾಗಿ ನಿಂತು ಮುಂದಾಗುವ ದೊಡ್ಡ ಅನಾಹುತವನ್ನು ತಪ್ಪಿಸಿದೆ ಎನ್ನಲಾಗಿದೆ.