ಬಳ್ಪ ಕುಂಜತ್ತಾಡಿ ಕುಟುಂಬದ ದೈವಗಳ ನೇಮೋತ್ಸವ -ಆರಂಭ

0

ಬಳ್ಪ ಗ್ರಾಮದ ಕುಂಜತ್ತಾಡಿ ದೈವಸ್ಥಾನದ ವಠಾರದಲ್ಲಿ ಕುಂಜತ್ತಾಡಿ ಕುಟುಂಬದ ಶ್ರೀ ಉಳ್ಳಾಕುಲು, ಶ್ರೀ ಧರ್ಮದೈವ, ಶ್ರೀ ಶಿರಾಡಿ ದೈವಗಳ ಹಾಗೂ ಪರಿವಾರ ದೈವಗಳ ನೇಮೋತ್ಸವ ಫೆ.28 ರಿಂದ ಮಾ.1 ರವರೆಗೆ ನಡೆಯಲಿದೆ.ಫೆ.28 ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹವನ, ನಾಗ ತಂಬಿಲ ,ಶ್ರೀ ವೆಂಕಟ್ರಮಣ ದೇವರ ಮುಡಿಪು ಶುದ್ದ ನಡೆಯಿತು.

ಫೆ.29 ರಂದು ಬೆಳಿಗ್ಗೆ ಗಂಟೆ 8 ರಿಂದ ಉಳ್ಳಾಕುಲು ದೈವಗಳ ನೇಮ, ನಂತರ ಪ್ರಸಾದ ವಿತರಣೆ ಮಧ್ಯಾಹ್ನ ಪುರುಷ ದೈವದ ನೇಮ, ಅನ್ನಸಂತರ್ಪಣೆ ಸಂಜೆ ಶ್ರೀ ದೈವಗಳ ಭಂಡಾರ ತೆಗೆಯುವುದು. ಬಿರ್ಮೆರ ನೇಮ, ರಾತ್ರಿ ವ್ಯಾಘ್ರ ಚಾಮುಂಡಿ ನೇಮ,ಅನ್ನಸಂತರ್ಪಣೆ ,ಕಲ್ಲುರ್ಟಿ ದೈವದ ನೇಮ ,ದ್ಯಾವತೆ ನೇಮ , ವರ್ಣಾರ ಪಂಜುರ್ಲಿ ನೇಮ, ಕುಪ್ಪೆ ಪಂಜುರ್ಲಿ ನೇಮ.

ಮಾ.1ರಂದು ಬೆಳಿಗ್ಗೆ ಗಂಟೆ 7ರಿಂದ ಧರ್ಮದೈವದ ನೇಮ, ಶಿರಾಡಿ ದೈವದ ನೇಮ, ಗಡಿಗೆ ಹೋಗುವುದು, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಅಪರಾಹ್ನ ಗುಳಿಗ ದೈವಗಳ ನೇಮ ನಡೆಯಲಿದೆ.