ಪಾಲಡ್ಕ : ಖಾಸಗಿ ಬಸ್ ಮತ್ತು ಬೈಕ್ ಅಪಘಾತ, ಬೈಕ್ ಸವಾರನಿಗೆ ಗಾಯ

0

ಸುಳ್ಯದ ಅರಂಬೂರು ಸಮೀಪ ಪಾಲಡ್ಕದಲ್ಲಿ ಬೈಕ್ ಮತ್ತು ಖಾಸಗಿ ಬಸ್ಸಿನ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಇದೀಗ ವರದಿಯಾಗಿದೆ. ಬೈಕ್ ಸವಾರ ಗೂನಡ್ಕ ಮಾರುತಿ ಶಾಲೆಯ ಹಿಂದಿಯ ಶಿಕ್ಷಕ ಪದ್ಮನಾಭರವರು ಬೈಕ್ ಚಲಾಯಿಸುತ್ತಿದ್ದು, ಗಾಯಾಳುವನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.