ಮಾ.‌ 1ರಿಂದ ದ.ಕ. ಜಿಲ್ಲೆಯಲ್ಲಿ ನೂತನವಾಗಿ ನೊಂದಾಯಿಸಲ್ಪಟ್ಟ ಗೃಹರಕ್ಷಕರಿಗೆ ತರಬೇತಿ

0

ಮುಂಬರುವ ಚುನಾವಣಾ ಸಂಬಂಧ ಕೇಂದ್ರ ಕಛೇರಿಯ ಮಂಜೂರಾತಿಯಂತೆ ಜಿಲ್ಲೆಯಲ್ಲಿ ನೂತನವಾಗಿ ನೊಂದಾಯಿಸಲ್ಪಟ್ಟ ಗೃಹರಕ್ಷಕರಿಗೆ ತರಬೇತಿ
ಮಾ. 1 ರಿಂದ ಮಾ. 10 ರವರೆಗೆ ಜಿಲ್ಲಾ ಗೃಹರಕ್ಷಕ ದಳ ಕಛೇರಿ, ಮೇರಿಹಿಲ್, ಮಂಗಳೂರಿನಲ್ಲಿ ಮೂಲ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. 10 ದಿನಗಳ ಅವಧಿಯಲ್ಲಿ ನಡೆಯುವ ತರಬೇತಿಯಲ್ಲಿ 55 ಗೃಹರಕ್ಷಕರಿಗೆ ವಿವಿಧ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಿಂದ ರೈಫಲ್ ತರಬೇತಿ, ಅಗ್ನಿಶಮನ ತರಬೇತಿ, ಪ್ರಥಮ ಚಿಕಿತ್ಸೆ ತರಬೇತಿ, ಲಾಠಿ ಡ್ರಿಲ್, ನಿಸ್ತಂತು ತರಬೇತಿ, ವಿಪತ್ತು ನಿಯಂತ್ರಣ ತರಬೇತಿ, ಸಂಚಾರ ನಿಯಂತ್ರಣ ಮುಂತಾದ ತರಬೇತಿಗಳನ್ನು ನೀಡಲಾಗುವುದು. ಇಂದು ಮಧ್ಯಾಹ್ನ ತರಬೇತಿ ಶಿಬಿರದ ಉದ್ಘಾಟನೆಯನ್ನು ಪೊಲೀಸ್ ಉಪ ಆಯುಕ್ತರಾದ ಬಿ.ಪಿ. ದಿನೇಶ್ ಕುಮಾರ್ ಮಾಡಲಿದ್ದಾರೆ. ತರಬೇತಿಯು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರುರವರ ನೇತೃತ್ವದಲ್ಲಿ ನಡೆಯಲಿದೆ ಎಂದು ಗೃಹರಕ್ಷಕದಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.