ಮಾ.10 : ಪೆರುವಾಜೆ ಜೆ.ಡಿ.ಅಡಿಟೋರಿಯಂ ನಲ್ಲಿ ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ಮಾಸಿಕ ಸಭೆ – ಸಾಧಕರಿಗೆ ಸನ್ಮಾನ

0

ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘ ಸುಳ್ಯ ಇದರ ಮಾಸಿಕ ಸಭೆ ,ಸಾಧಕರಿಗೆ ಸನ್ಮಾನ ,ಕೆವಿಜಿ ಬ್ಯಾಂಕ್ ನ ಹಲವು ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ಮಾ.10 ರಂದು ಅಪರಾಹ್ನ ಗಂಟೆ 2.30 ಕ್ಕೆ ಪೆರುವಾಜೆ ಜೆಡಿ ಅಡಿಟೋರಿಯಂ ನಲ್ಲಿ ನಡೆಯಲಿದೆ.
ಸಂಘದ ಅಧ್ಯಕ್ಷರಾದ ಯಂ. ಹರಿಶ್ಚಂದ್ರರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಚೊಕ್ಕಾಡಿ ಭಗವಾನ್ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಸಾಯಿ ಪ್ರಸಾದ್ ಎಸ್. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಬೆಳ್ಳಾರೆ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸತೀಶ್ ಪಾಂಬಾರು ಉಪಸ್ಥಿತರಿರುವರು.
ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯ.ಸ.ಮಾಜಿ ಅಧ್ಯಕ್ಷ ಪಿ.ಪದ್ಮನಾಭ ಶೆಟ್ಟಿ,ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಚಂದ್ರಶೇಖರ ಭಟ್, ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭಜನಾ ಮಂಡಳಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಮುಂಡುಗಾರುರವರನ್ನು ಸನ್ಮಾನಿಸಲಾಗುವುದು.
ಹಾಗೂ ಪೆರುವಾಜೆ ದೇವಸ್ಥಾನದ ವ್ಯ.ಸ.ಮಾಜಿ ಸದಸ್ಯರಾದ ಅರ್ಚಕ ರಾದ ಶ್ರೀನಿವಾಸ ಹೆಬ್ಬಾರ್,ವೆಂಕಟಕೃಷ್ಣ ರಾವ್,ದಾಮೋದರ ನಾಯ್ಕ,ಜಗನ್ನಾಥ ಕೆ,ಶ್ರೀಮತಿ ಯಶೋಧ ಪ್ರಭು,ಜಯಪ್ರಕಾಶ್ ರೈ ಬಿ,ನಾರಾಯಣ ಕೆ, ಶ್ರೀಮತಿ ಭಾಗ್ಯಲಕ್ಷ್ಮೀ ಯವರನ್ನು ಅಭಿನಂದಿಸಲಾಗುವುದು.