ಅನಿದಿತ್ ಕೊಚ್ಚಿ ಬರೆದ ರಿ ಕಾಲಿಂಗ್ ಅಮರ್ ಸುಳ್ಯ ಕ್ರಾಂತಿ ಇಂಗ್ಲಿಷ್ ಅವತರಣಿಕೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿಯವರಿಗೆ ಹಸ್ತಾಂತರ

0

ಅಮರ ಸುಳ್ಯ ಕ್ರಾಂತಿ 1837 ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮ ದ ಬಗ್ಗೆ ಸುಳ್ಯದ ಅನಿದಿತ್ ಕೊಚ್ಚಿ ಬಾರಿಕೆ ಬರೆದಿರುವ ಇಂಗ್ಲಿಷ್ ಅವತರಣಿಕೆ “ರಿ ಕಾಲಿಂಗ್ ಅಮರ್ ಸುಳ್ಯ ಪುಸ್ತಕ ವನ್ನು ಕೇಂದ್ರ ಸಚಿವೆ,ಬಿಜೆಪಿ ವಕ್ತಾರೆ, ಸಂಸದೆ ಮೀನಾಕ್ಷಿ ಲೇಖಿ ಯವರಿಗೆ ದೆಹಲಿಯ ಲ್ಲಿ ನೀಡಿದರು.1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ದ 20 ವರ್ಷ ಹಿಂದೆ ಸುಳ್ಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆದಿರುವ ಬಗ್ಗೆ ಮಾಹಿತಿ ತಿಳಿಸಿದರು.ಲೇಖಕ ಅನಿದಿತ್ ಬಾರಿಕೆ ಬಗ್ಗೆ ಮೀನಾಕ್ಷಿ ಲೇಖಿ ಮೆಚ್ಚುಗೆ ವ್ಯಕ್ತಪಡಿಸಿದರು.ಅನಿದಿತ್ ಪ್ರಸ್ತುತ ಸ್ಕಾಲರ್ ಶಿಪ್ ಮೂಲಕ ದೆಹಲಿಯ ಪ್ರತಿಷ್ಠಿತ ಐ ಐ ಪಿ ಫೌಂಡೇಶನ್ ಕಥೆ ಹಾಗೂ ಭಾವನೆ ಗಳ ಬಗ್ಗೆ ಪ್ರಸ್ತುತ ಪಡಿಸುವ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.ಇವರು
ಸುಧಾಕರ ಮತ್ತು ವಿಜಯಲಕ್ಷ್ಮಿ ಕೊಚ್ಚಿ ದಂಪತಿಗಳ ಪುತ್ರ.