ಜಟ್ಟಿಪಳ್ಳ ಸೂರ್ತಿಲದಲ್ಲಿ ರಸ್ತೆಯ ಮೇಲೆ ಬಿಟ್ಟಿರುವ ಪೈಪುಗಳು ಅಪಾಯಕ್ಕೆ ಆಹ್ವಾನ

0

ಜಟ್ಟಿಪಳ್ಳದಿಂದ ಸೂರ್ತಿಲ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ನೀರು ಸರಬರಾಜಿನ ಪೈಪುಗಳನ್ನು ಹಾಕಲಾಗಿದ್ದು ಉಳಿದ ಪೈಪುಗಳನ್ನು ರಸ್ತೆಯ ಮೇಲೆ ಬಿಟ್ಟಿದ್ದು ಅಪಾಯಕಾರಿ ಸ್ಥಿತಿಯಲ್ಲಿ ದೆ. ವಾಹನ ಸವಾರರು ಎದುರಿನಿಂದ ಬರುವ ವಾಹನಗಳಿಗೆ ಸೈಡ್ ಕೊಡುವ ಸಂದರ್ಭದಲ್ಲಿ ಪೈಪಿನ ಮೇಲೆ ಹತ್ತಿಸಿಕೊಂಡು ಹೋಗಬೇಕಾಗಿದೆ. ಇದರಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ದೂರಿದ್ದಾರೆ.