ತೊಡಿಕಾನ – ದೊಡ್ಡಕುಮೇರಿ : ನಾಗಬ್ರಹ್ಮ ದೇವರ ಪ್ರತಿಷ್ಠೆ

0

ತೊಡಿಕಾನ ಗ್ರಾಮದ ದೊಡ್ಡ ಕುಮೇರಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ನಾಗಬ್ರಹ್ಮ ದೇವರ ಪ್ರತಿಷ್ಠೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ರಾಘವ ಎಮಾಜೆ ಇವರ ನೇತೃತ್ವದಲ್ಲಿ ಮಾರ್ಚ್ 1ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ನಾಗಬ್ರಹ್ಮ ದೇವರ ಗುಡಿ ಸೇವಾ ಕರ್ತರಾದ ಶ್ರೀಮತಿ ಹೇಮಲತಾ ಕರುಣಾಕರ ತೊಡಿಕಾನ, ಆಡಳಿತ ಸಮಿತಿಯ ಅಧ್ಯಕ್ಷ ಭರತ್ ಬಾಳೆಕಜೆ, ಗೌರವ ಅಧ್ಯಕ್ಷ ಕೇಪು ದೊಡ್ಡಕುಮೇರಿ, ಕೋಶಾಧಿಕಾರಿ ರವೀಂದ್ರ ಪಂಜಿಕೋಡಿ, ಕೃಷ್ಣಪ್ಪ ಪೂಜಾರಿ, ಸುನಂದ ಅಡಿಗಾರ, ದಿವಾಕರ ಕಳ್ಳಂಬಳ, ರಾಜು ಮೇಸ್ತ್ರಿ, ಲವಪ್ಪ ಪಿಲಿಕಜೆ, ಪ್ರಧಾನ ಕಾರ್ಯದರ್ಶಿ ದೇವಪ್ಪ ಹೈದಂಗೂರು, ಗುರುಕಿರಣ್, ಜಿತೇಂದ್ರ ಪಂಜಿಕೋಡಿ, ಲಂಕೇಶ್. ಪಿ, ದೈವಸ್ಥಾನದ ಪೂಜಾರಿಗಳಾದ


ಚನಿಯ ದೊಡ್ಡಕುಮೇರಿ, ಗುರುವಪ್ಪ ದೊಡ್ಡಕುಮೇರಿ, ಬಾಬು ಎಂ, ಚೌಕಾರು ದೊಡ್ಡಕುಮೇರಿ , ಬಾಬು ದೊಡ್ಡ ಕುಮೇರಿ, ಶಂಕರ ದೊಡ್ಡಕುಮೇರಿ, ಸುರೇಶ ದೊಡ್ಡಕುಮೇರಿ, ಜಯರಾಮ ದೊಡ್ಡಕುಮೇರಿ, ಶಶಿಧರ ದೊಡ್ಡಕುಮೇರಿ, ಸ್ಥಳೀಯ ಮನೆಯವರು ಹಾಗೂ ಊರವರು ಉಪಸ್ಥಿತರಿದ್ದರು.