ಶತಾಯುಷಿ ಮೊಯಿದೀನ್ ಕುಂಞಿ ಕಳಂಜ‌, ಪೊಸೋಡು ನಿಧನ

0

ಬಾಳಿಲ ಗ್ರಾಮದ ಕಳಂಜ‌, ಪೊಸೋಡು ಶತಾಯುಷಿ ಮೊಯಿದೀನ ಕುಂಞಿ (ಮೋನುಚ್ಚ) ಅಸೌಖ್ಯದಿಂದ ಮಾ. 1ರಂದು‌ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 101 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಸಲ್ಮಾ, ಪುತ್ರ ಬೆಳ್ಳಾರೆ ಉದಯ ಚಿಕನ್ ಬಜಾರ್ ಮಾಲಕ ಕೆ.ಎಂ. ಮುಹಮ್ಮದ್ (ಮೊಯಿಲಾರ್ಚ), ಪುತ್ರಿಯರಾದ ಶ್ರೀಮತಿ ಸಾರಾ ಅಬ್ದುಲ್ಲಾ ಎಸ್.ಎಂ. ಪೈಚಾರು, ಶ್ರೀಮತಿ ಸಫಿಯಾ ಇಬ್ರಾಹಿಂ (ಉಂಬಯಿ) ಪೊಸೋಡು, ಸಹೋದರಿ ಶ್ರೀಮತಿ ಬಿ. ಫಾತಿಮ ನೆಕ್ಕಿಲ ಸೇರಿದಂತೆ ಸೊಸೆ, ಮೊಮ್ಮಕ್ಕಳು, ಮರಿಮಕ್ಕಳು, ಅಪಾರ ಬಂಧುಗಳನ್ನು ಅಗಲಿದ್ದಾರೆ