ಗುತ್ತಿಗಾರಿನಲ್ಲಿ ಶಿಕ್ಷಕರಾಗಿದ್ದ ಕೆ.ಎಂ ತಿಮ್ಮಪಯ್ಯ ನಿಧನ

0

ಗುತ್ತಿಗಾರಿನ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಕೆ.ಎಂ ತಿಮ್ಮಪಯ್ಯ ಮಾ.1 ರಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 82 ನೇ ವರ್ಷ ವಯಸ್ಸಾಗಿತ್ತು.


ಮೂಲತಹ ಕೊಲ್ಲಮೊಗ್ರದ ಕಟ್ಟದವರು. ಗುತ್ತಿಗಾರಿನ ಹೈಸ್ಕೂಲ್ ನಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು.


ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ತಮ್ಮ ಮಗನೊಂದಿಗಿದ್ದು ವಾಸವಿದ್ದರು. ಮೃತರು ಪತ್ನಿ ಜಯಂತಿ, ಪುತ್ರ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ರಾಜೇಶ್, ಪುತ್ರಿ ಶ್ರೀಮತಿ ಮಲ್ಲಿಕಾ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ