ಯೇನೆಕಲ್ಲು : ಶ್ರೀ ಪಿಲಿಭೂತ – ಕುಂಟ್ರಾಂಡಿ ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವ

0

ಯೇನೆಕಲ್ಲು ಗ್ರಾಮದ ಪರ್ಲ ಹೊಸಂಗಡಿ ಕೂಡುಕಟ್ಟಿನ ಶ್ರೀ ಪಿಲಿಭೂತ – ಕುಂಟ್ರಾಂಡಿ ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಯು ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಇಂದು ನಡೆಯಿತು. , ರಾತ್ರಿ ಶ್ರೀ ದೈವಗಳ ಭಂಡಾರ ತೆಗೆದು ನೇಮೋತ್ಸವ ಹಾಗೂ ನಾಳೆ ದೈವಗಳ ನೇಮೋತ್ಸವವು ನಡೆಯಲಿರುವುದು.

ನಿನ್ನೆ ಬೆಳಿಗ್ಗೆ ದೇವತಾ ಪ್ರಾಥನೆ, ಆಚಾರ್ಯವರಣ ಸ್ವಸ್ತಿ ಪುಣ್ಯಾಹ, ಮಹಾಗಣಪತಿ ಹೋಮ ಶ್ರೀ ಭಾಗ್ಯ ಐಕ್ಯಮತ್ಯ ಸೂಕ್ತ ಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಸಂಜೆ ದುರ್ಗಾ ಪೂಜೆ. ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತು ಪೂಜಾ ಬಲಿ, ಪ್ರಕಾರ ಬಲಿ, ವಾಸ್ತು ಪುಣ್ಯಾಹ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಇಂದು ಬೆಳಿಗ್ಗೆ ಗಣಪತಿ ಹೋಮ, ಕಲಶ ಪೂಜೆ, ಬೆಳಿಗ್ಗೆ ಗಂಟೆ 10:53 ರ ವೃಷಭ ಲಗ್ನದ ಶುಭಮೂಹೂರ್ತದಲ್ಲಿ ಶ್ರೀ ಪಿಲಿಭೂತ ದೈವ ಹಾಗೂ ಸಪರಿವಾರ ದೈವಗಳ ಪ್ರತಿಷ್ಠೆ ಕಲಶಾಭಿಷೇಕ ಮತ್ತು ತಂಬಿಲ ಸೇವೆ ಹಾಗೂ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಊರ ಭಕ್ತಾಭಿಮಾನಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಸಂಜೆ ಬಾಲಾಡಿ ತರವಾಡು ಮನೆಯಿಂದ ಶ್ರೀ ಕುಂಟ್ರಾಂಡಿ ಮತ್ತು ಪುರುಷ ದೈವದ ಭಂಡಾರ ಬರುವುದು.

ರಾತ್ರಿ ಅಭಿನಂದನಾ ಸಭಾ ಕಾರ್ಯಕ್ರಮ

ಅನ್ನಸಂತರ್ಪಣೆ

ರಾತ್ರಿ ಪಂಜುರ್ಲಿ ದೈವದ ನೇಮ, ಶ್ರೀ ಕುಂಟ್ರಾಂಡಿ ದೈವದ ನೇಮ, ನಡೆಯಲಿರುವುದು.

ನಾಳೆ ಬೆಳಿಗ್ಗೆ ಪಿಲಿಭೂತ ದೈವದ ನೇಮ, ಪುರುಷ ದೈವದ ನೇಮ

ಪ್ರಸಾದ ವಿತರಣೆ & ಅನ್ನಸಂತರ್ಪಣೆ ನಡೆಯಲಿದೆ.