ಮಾ. 8 – 10: ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಮತ್ತು ಶತರುದ್ರಾಭಿಷೇಕ

0

ಕೊಡಗು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮತ್ತು ಶತರುದ್ರಾಭಿಷೇಕ ಕಾರ್ಯಕ್ರಮವು ಮಾ.8-10ರವರೆಗೆ ನಡೆಯಲಿದೆ.

ಮಾರ್ಚ್ 8ರಂದು ಬೆಳಿಗ್ಗೆ ಶ್ರೀ ದೇವರಿಗೆ ವಿಶೇಷ ಪೂಜೆ ನಡೆಯಲಿದ್ದು, ಸಂಜೆ ಕೊಡಗು ಸಂಪಾಜೆ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ, ರಾತ್ರಿ ಪುರೋಹಿತ ಶ್ರೀಕೃಷ್ಣ ಭಟ್ ಅರಂಬೂರು ಅವರ ನೇತೃತ್ವದಲ್ಲಿ ಸಂಕಲ್ಪದೊಂದಿಗೆ ಶ್ರೀ ದೇವರಿಗೆ ಶತರುದ್ರಾಭಿಷೇಕ ವಿಶೇಷ ಪೂಜೆ , ರಾತ್ರಿ ರಂಗಪೂಜೆ ಮತ್ತು ಮಹಾ ಮಂಗಳಾರತಿ ನಡೆಯಲಿದೆ.

ಮಾ.9ರಂದು ಬೆಳಿಗ್ಗೆ ಅಪ್ಪು ಮೆಲೋಡಿಸ್ ಕುದ್ರೆಪಾಯ ತಂಡದಿಂದ ಭಕ್ತಿಗಾನ ಸುಧೆ, ಮಧ್ಯಾಹ್ನ ಮಹಾಪೂಜೆ ಮತ್ತು ಸಮಾರಾಧನೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ.

ಮಾ.10 ವನಶಾಸ್ತಾರ ಮತ್ತು ವನದುರ್ಗ ಪೂಜೆ ಹಾಗೂ ವನ ಭೋಜನ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮವು ಸಮಾಪನಗೊಳ್ಳಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸದಸ್ಯರು ತಿಳಿಸಿದ್ದಾರೆ.