ಅರಂತೋಡು : ಅಕ್ರಮ ಮರಳು ಸಾಗಾಟದ ಟಿಪ್ಪರ್ ವಶ

0

ಸುಳ್ಯ ಪೊಲೀಸರ ಕಾರ್ಯಾಚರಣೆ

ಇಂದು ಬೆಳ್ಳಂಬೆಳಗ್ಗೆ ಅರಂತೋಡು ಜಂಕ್ಷನ್ ಬಳಿ ಅಕ್ರಮ ಮರಳು ಸಾಗಾಟದ ಟಿಪ್ಪರ್ ಲಾರಿಯನ್ನು ಸುಳ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಸುಳ್ಯ ಪೊಲೀಸ್ ಠಾಣಾ ಅಪರಾಧ ತನಿಖಾ ವಿಭಾಗದ ಉಪನಿರೀಕ್ಷಕರಾದ ಸರಸ್ವತಿಯವರು ಕಲ್ಲುಗುಂಡಿ ಕಡೆಯಿಂದ ತಮ್ಮ ಸಿಬ್ಬಂದಿಗಳೊಂದಿಗೆ ಬರುತ್ತಿದ್ದ ಸಂದರ್ಭ ಮರಳು ತುಂಬಿದ ಟಿಪ್ಪರ್ ವಾಹನ ರಸ್ತೆಯಲ್ಲಿ ನಿಂತಿದ್ದು ವಾಹನದತ್ತ ತೆರಳುತ್ತಿದ್ದ ಸಂದರ್ಭ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈ ವೇಳೆ ಟಿಪ್ಪರ್ ಲಾರಿಯನ್ನು ಪರಿಶೀಲಿಸಿದಾಗ ಲಾರಿಯಲ್ಲಿ ಮರಳು ತುಂಬಿರುವುದು ಕಂಡುಬಂದಿದ್ದು ಕೂಡಲೇ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡು ಸುಳ್ಯ ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.