ನಾಳೆ ಸಂಪಾಜೆ- ಮುಂಡಡ್ಕ – ಆಲಡ್ಕ ಗಡಿಕಲ್ಲು ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ದ.ಕ. ಸಂಪಾಜೆ ಗ್ರಾಮದ ಗಡಿಕಲ್ಲು ಮುಂಡಡ್ಕ ಆಲಡ್ಕ ಕಾಂಕ್ರಿಟ್ ರಸ್ತೆಯು ನಾಳೆ ಉದ್ಘಾಟನೆಗೊಳ್ಳಲಿದೆ.

ಸಂಪಾಜೆ ಗ್ರಾಮದ ಗಡಿಕಲ್ಲು ನಿವಾಸಿಗಳ ಬಹು ದಿನಗಳ ಬೇಡಿಕೆಯಾದ ರಸ್ತೆ ಕಾಂಕ್ರಿಟ್ ನಿರ್ಮಾಣ ಕಾಮಗಾರಿಗೆ ಗ್ರಾಮ ಪಂಚಾಯತಿಯ ಐದನೇ ವಾರ್ಡ್ ಸದಸ್ಯರುಗಳಾದ ಜಿ. ಕೆ. ಹಮೀದ್ ಗೂನಡ್ಕ, ಶ್ರೀಮತಿ ಸುಂದರಿ ಮುಂಡಡ್ಕ, ವಿಜಯ ಆಲಡ್ಕ, ರಜನಿ ಶರತ್ ಅವರು ಸೇರಿ ಗ್ರಾಮ ಪಂಚಾಯತಿ 15ನೇ ಹಣಕಾಸು ಯೋಜನೆ ಹಾಗೂ ಸ್ವಂತ ನಿಧಿ ಅನುದಾನ ಮಿಸಲಿಟ್ಟು ರಸ್ತೆ ಕಾಮಗಾರಿ ಮಾಡಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್.ಕೆ. ಹನೀಫ್ ಕಲ್ಲುಗುಂಡಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ಡಿಸೋಜ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿರಲಿದ್ದಾರೆ.