ಶ್ರೀರಾಂಪೇಟೆ ಗಂಟೆಯ ಅಂತರದಲ್ಲಿ ಎರಡು ವಾಹನ ಅಪಘಾತಗಳು

0

ಸುಳ್ಯ ಶ್ರೀರಾಮ್ ಪೇಟೆಯ ಬಳಿ ಮಾರ್ಚ್ 5ರಂದು ರಾತ್ರಿ ಗಂಟೆಯ ಅಂತರದಲ್ಲಿ ಎರಡು ಪ್ರತ್ಯೇಕ ವಾಹನ ಅಪಘಾತಗಳು ಸಂಭವಿಸಿದ್ದು ಘಟನೆಯಿಂದ ದ್ವಿಚಕ್ರ ವಾಹನ ಸವಾರರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಸುಳ್ಯ ಮುಖ್ಯರಸ್ತೆಯಿಂದ ಜಟ್ಟಿಪಳ್ಳ ತಿರುವು ಬಳಿ ಎರಡು ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಘಟನೆಯಿಂದ ತಾಯಿ ಮಗು ಅದೃಷ್ಟವಶಾತ್ ಪಾರಾದರೆ ಈ ಘಟನೆ ನಡೆದು ಕೆಲವೇ ಸಮಯದಲ್ಲಿ ಅಲ್ಲಿಂದ ಸ್ವಲ್ಪ ದೂರದ ಸಂಗಮ್ ಕಾಂಪ್ಲೆಕ್ಸ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನ ಕಾಲಿಗೆ ಗಾಯವಾದ ಘಟನೆ ವರದಿಯಾಗಿದೆ.