ದಕ್ಷಿಣ ಬೀರಮಂಗಿಲದ ಕೆಲವು ಮನೆಗಳಲ್ಲಿ ನಲ್ಲಿಯಲ್ಲಿ ಬರುತ್ತಿರುವ ಮಣ್ಣು ಮಿಶ್ರಿತ ನೀರು

0

ಸುಳ್ಯದ ದಕ್ಷಿಣ ಬೀರಮಂಗಿಲದ ಕೆಲವು ಮನೆಗಳಲ್ಲಿ ನಗರ ಪಂಚಾಯತಿ ವತಿಯಿಂದ ಬರುತ್ತಿರುವ ಕುಡಿಯುವ ನೀರು ಮಣ್ಣು ಮಿಶ್ರಿತವಾಗಿ ಕೆಂಪು ಬಣ್ಣದಿಂದ ಬರುತ್ತಿದ್ದು ನೀರಿಗಾಗಿ ಸಮಸ್ಯೆ ಎದುರಾಗಿದೆ.

ಮನೆಯಲ್ಲಿ ಕುಡಿಯುವ ನೀರಿಗಾಗಿ ಸ್ಥಳೀಯರ ಬಾವಿಯ ಆಶ್ರಯ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಬಿರು ಬಿಸಿಲಿನ ಸಂದರ್ಭದಲ್ಲಿ ಕುಡಿಯುವ ನೀರು ಈ ರೀತಿ ಆದರೆ ನಾವುಗಳು ಏನು ಮಾಡಬೇಕೆಂದು ಸ್ಥಳೀಯ ನಿವಾಸಿಗಳು ತಮ್ಮ ಅಹವಾಲುಗಳನ್ನು ಸುದ್ದಿ ಮಾಧ್ಯಮದ ಮುಂದೆ ತಿಳಿಸಿದ್ದಾರೆ.