ಜೀಪ್ ಮತ್ತು ಲಾರಿಗೆ ಕಂಟೈನರ್ ಲಾರಿ ಗುದ್ದಿ ಸುಳ್ಯ ಶ್ರೀರಾಮ್ ಪೇಟೆಯಲ್ಲಿ ರಸ್ತೆ ಬ್ಲಾಕ್

0

ಜೀಪ್ ಮತ್ತು ಲಾರಿಯೊಂದಕ್ಕೆ ಕಂಟೈನರ್ ಲಾರಿ ಗುದ್ದಿದ ಪರಿಣಾಮವಾಗಿ ವಾಹನಗಳು ರಸ್ತೆ ಮಧ್ಯದಲ್ಲಿ ನಿಲ್ಲಿಸಲ್ಪಟ್ಟು ಶ್ರೀರಾಮ್ ಪೇಟೆಯಲ್ಲಿರುವ ಪ್ರಧಾನ ಅಂಚೆ ಕಚೇರಿಯ ಮುಂಭಾಗದಲ್ಲಿ ಮುಖ್ಯ ರಸ್ತೆ ಬ್ಲಾಕ್ ಆಗಿದೆ.


ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಶ್ರೀ ಸಾಯಿ ಲಾಗಿಸ್ಟಿಕ್ಸ್ ಮತ್ತು ಶಿಪ್ಪಿಂಗ್ ಸಂಸ್ಥೆಯ ಕಂಟೈನರ್ ಲಾರಿ ಸಿಮೆಂಟ್ ಲೋಡ್ ಲಾರಿಯೊಂದಕ್ಕೆ ಗುದ್ದಿತಲ್ಲದೆ ಜೀಪೊಂದಕ್ಕೆ ಕೂಡಾ ಗುದ್ದಿ ರಸ್ತೆ ಮಧ್ಯಭಾಗದಲ್ಲಿ ನಿಂತಿದೆ. (ಕಂಟೈನರ್ ನಂ. KA 19AE4618, ಜೀಪ್ ನಂ. KL03C1892, ಸಿಮೆಂಟ್ ಲಾರಿ ನಂ. KA 21C0799) ಪೊಲೀಸರು ಸ್ಥಳಕ್ಕೆ ತಲುಪಿಲ್ಲ. ಬರೇ ಕಷ್ಟಪಟ್ಟು ಬದಿಯಿಂದಾಗಿ ಆ ಕಡೆಗೆ ವಾಹನಗಳನ್ನು ಕಳುಹಿಸುತ್ತಿದ್ದಾರೆ.