ನಾಮದೇವ ತಂಟೆಪ್ಪಾಡಿ ನಿಧನ

0

ಪುತ್ತೂರು ತಾಲೂಕಿನ ತಿಂಗಳಾಡಿಯಲ್ಲಿ ವಾಸವಾಗಿದ್ದ ನಿವೃತ್ತ ಬಿ.ಎಸ್‌. ಎನ್.ಎಲ್ ಉದ್ಯೋಗಿ ಕಳಂಜ ಗ್ರಾಮದ ತಂಟೆಪ್ಪಾಡಿ ನಾಮದೇವರು ಅಸೌಖ್ಯದಿಂದ ಇಂದು (ಮಾ. 8) ರಂದು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 60 ವರ್ಷ ವಯಸ್ಸಾಗಿತ್ತು. ಇವರು ಬಿ.ಎಸ್. ಎನ್.ಎಲ್ ನಲ್ಲಿ ಟೆಕ್ನೀಷಿಯನ್ ಆಗಿ ಸ್ವಯಂ ನಿವೃತ್ತಿ ಪಡೆದಿದ್ದರು. ಮೃತರು ಪತ್ನಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ಶ್ರೀಮತಿ ಕುಸುಮ, ಪುತ್ರ ಸುಜಿತ್ ಎನ್.ಟಿ, ಪುತ್ರಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಕು. ಸುಶ್ಮಿತಾ ಎನ್.ಟಿ, ಸಹೋದರರಾದ ಕುಸುಮಾಧರ ಗೌಡ ತಂಟೆಪ್ಪಾಡಿ, ಪುರುಷೋತ್ತಮ ಗೌಡ ತಂಟೆಪ್ಪಾಡಿ, ಚಂದ್ರಶೇಖರ ಗೌಡ ತಂಟೆಪ್ಪಾಡಿ, ಸಹೋದರಿಯರಾದ ಶ್ರೀಮತಿ ಲಲಿತಾ ಗಿರಿಯಪ್ಪ ಗೌಡ ಸಾಲ್ತಾಡಿ ಗುತ್ತಿಗಾರು, ಶ್ರೀಮತಿ ಚಂದ್ರಾವತಿ ಪೂವಪ್ಪ ಗೌಡ ಎಲಿಮಲೆ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.