ಕ್ರೇನ್ ನಲ್ಲಿ ಎತ್ತಿ ಕಂಟೈನರ್ ರಸ್ತೆ ಬದಿಗೆ

0

ಶ್ರೀರಾಂ ಪೇಟೆ ರಸ್ತೆ ಬ್ಲಾಕ್ ತೆರವು

ಸುಳ್ಯದ ಶ್ರೀರಾಂ ಪೇಟೆಯಲ್ಲಿ ಕಂಟೈನರ್ ಒಂದು ಲಾರಿಗೆ ಮತ್ತು ಜೀಪಿಗೆ ಢಿಕ್ಕಿ ಹೊಡೆದು ಟಯರ್ ಜಾಮ್ ಆದ ಕಾರಣ ಆದ ರಸ್ತೆ ತಡೆಯನ್ನು ಕ್ರೇನ್ ಮೂಲಕ ಕಂಟೈನರನ್ನು ರಸ್ತೆ ಬದಿಗೆ ಇರಿಸುವುದರ ಮೂಲಕ ಇದೀಗ ತೆರವುಗೊಳಿಸಲಾಗಿದೆ.


ಐವರ್ನಾಡಿನ ಸತೀಶ್ ಜಬಳೆಯವರ ಕ್ರೇನ್ ಮೂಲಕ ಕಂಟೈನರನ್ನು ಎತ್ತಿ ಎಳೆದು ರಸ್ತೆ ಬದಿಗೆ ಇರಿಸಲಾಯಿತು. ಪೋಲೀಸರು ಮತ್ತು ಸಾರ್ವಜನಿಕರು ಟ್ರಾಫಿಕ್ ನಿಯಂತ್ರಣ ಹಾಗೂ ಸುಗಮ ಸಂಚಾರದ ವ್ಯವಸ್ಥೆಯನ್ನು ಸ್ವಯಂಪ್ರೇರಿತವಾಗಿ ಮಾಡಿದರು.