ಆಲೆಟ್ಟಿ ಸದಾಶಿವ ದೇವಳದಲ್ಲಿ ಭಕ್ತಿ ಸಡಗರದ ಮಹಾ ಶಿವರಾತ್ರಿ ಉತ್ಸವ- ಆಕರ್ಷಕ ನೃತ್ಯ ಭಜನಾ ಮೆರವಣಿಗೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವದ ಪ್ರಯುಕ್ತ ಭಜನಾ ಸಂಕೀರ್ತನೆ ಹಾಗೂ ಆಕರ್ಷಕ ಉಲುಪೆಯ ಮೆರವಣಿಗೆಯೊಂದಿಗೆ ನಾರ್ಕೋಡು ಸದಾಶಿವ ಕ್ಷೇತ್ರದ ಮಹಾದ್ವಾರದ ಬಳಿಯಿಂದ ಆಕರ್ಷಕ ಕುಣಿತ ಭಜನೆಯು ಕ್ಷೇತ್ರದ ತನಕ ಸಾಗಿ ಬಂತು.

ವ್ಯವಸ್ಥಾಪನಾ ಸಮಿತಿ ಸದಸ್ಯ ಅಚ್ಚುತ ಮಣಿಯಾಣಿ ಆಲೆಟ್ಟಿ ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ಸದಾಶಿವ ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿದರು.