ತಾಲೂಕು ಮಟ್ಟದ ವಿಶ್ವಮಹಿಳಾ ದಿನಾಚರಣೆ ಸಾಂಸ್ಕೃತಿಕ ಸ್ಪರ್ಧೆ: ಪಂಜ ವನಿತಾ ಸಮಾಜಕ್ಕೆ ಪ್ರಶಸ್ತಿ

0

ಸುಳ್ಯ ತಾಲೂಕು ಮಹಿಳಾ ಒಕ್ಕೂಟ ಹಾಗು ಮೈತ್ರಿ ಮಹಿಳಾ ಮಂಡಲ ಜಯನಗರ ಇದರ ಜಂಟಿ ಆಶ್ರಯದಲ್ಲಿ ಮಾ. 10 ರಂದು ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಜಾನಪದ ನೃತ್ಯ, ಜಾನಪದ ಹಾಡು ಮತ್ತು ಕಿರು ನಾಟಕವನನ್ನೊಳಗೊಂಡ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪಂಜ ವನಿತಾ ಸಮಾಜ ವು ದ್ವಿತೀಯ ಸ್ಥಾನ ಗಳಿಸಿರುತ್ತದೆ.

ಸ್ಪರ್ಧೆಯಲ್ಲಿ ಶ್ರೀಮತಿ ಮಾಲಿನಿ ಕುದ್ವ, ಶ್ರೀಮತಿ ಪುಷ್ಪಾ ಡಿ ಪ್ರಸಾದ್, ಶ್ರೀಮತಿ ಪೂರ್ಣಿಮಾ ಜಾಕೆ, ಶ್ರೀಮತಿ ಜಲಜಾಕ್ಷಿ ಬೇರ್ಯ, ಶ್ರೀಮತಿ ಹೇಮಲತಾ ಜನಾರ್ಧನ್, ಶ್ರೀಮತಿ ರಾಜೀವಿ ಎರ್ಕ, ಶ್ರೀಮತಿ ರತ್ನಾವತಿ ಸಂಕಡ್ಕ,ಶ್ರೀಮತಿ ಚಿತ್ರಕಲಾ ಬೊಳ್ಳಾಜೆ, ಶ್ರೀಮತಿ ರತ್ನಾವತಿ ಬೊಳ್ಳಾಜೆ, ಶ್ರೀಮತಿ ಸುಮಾ ಕುದ್ವ, ಶ್ರೀಮತಿ
ಭಾರತಿ ಬೊಳ್ಳಾಜೆ, ಶ್ರೀಮತಿ
ಪುಷ್ಪಾ ಹರೀಶ್,ಶ್ರೀಮತಿ ಪೂರ್ಣಿಮ ದೇರಾಜೆ, ಶ್ರೀಮತಿ
ಆಶಾ ಮನು ಮತ್ತುಶ್ರೀಮತಿ
ಸೌಮ್ಯ ಹರೀಶ್ ಭಾಗವಹಿಸಿದ್ದರು.